ಗೋಕಾಕ:ಕಾಶಿ, ಗೋಕರ್ಣಕ್ಕೆ ಹೋದರೆ ಪುಣ್ಯ ಪ್ರಾಪ್ತಿಯಾಗುದಿಲ್ಲ ನಮ್ಮ ನೆಲದ ಪುಣ್ಯ ಪಡೆಯಲು ಸಾಧ್ಯ : ಪ್ರಭುಚನ್ನಬಸವ ಸ್ವಾಮಿಜೀ

ಕಾಶಿ, ಗೋಕರ್ಣಕ್ಕೆ ಹೋದರೆ ಪುಣ್ಯ ಪ್ರಾಪ್ತಿಯಾಗುದಿಲ್ಲ ನಮ್ಮ ನೆಲದ ಪುಣ್ಯ ಪಡೆಯಲು ಸಾಧ್ಯ : ಪ್ರಭುಚನ್ನಬಸವ ಸ್ವಾಮಿಜೀ
ಗೋಕಾಕ ಫೆ 1 : ಕಾಶಿ, ಗೋಕರ್ಣಕ್ಕೆ ಹೋದರೆ ಪುಣ್ಯ ಪ್ರಾಪ್ತಿಯಾಗುದಿಲ್ಲ, ಬದಲಾಗಿ ಸತ್ಯದ ದರ್ಶನ ಮಾಡಿಕೊಂಡು ನಮ್ಮ ನೆಲದ ಪುಣ್ಯ ಪಡೆಯಲು ಸಾಧ್ಯ ಎಂದು
ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20 ನೇ ಶರಣ ಸಂಸ್ಕೃತಿ ಉತ್ಸವದ ಮೊದಲ ದಿನದ ಹಾಸ್ಯ ಮತ್ತು ಸಂಗೀತ ಸಮಾವೇಶದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಬಸವವಾದಿ ಶರಣರ ತತ್ವ ಆರ್ದಶಗಳನ್ನು ತಿಳಿಸಲು ಶ್ರೀ ಶೂನ್ಯ ಸಂಪಾದನ ಮಠ ಕಾರ್ಯಮಾಡುತ್ತಿದ್ದೆ. ನಮಗೆ ನಾವು ಇತಿಹಾಸ ತಿಳಯದೆ ಹೋದರೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಗೋಕಾವಿ ನಾಡಿನಲ್ಲಿ ಹತ್ತಾರು ಜನ ಸಾಧಕ ಮಹನೀಯರು ಸಾಧನೆ ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಾವಿಂದು ಮಾಡಬೇಕಾಗಿದೆ. ಯುವಕರಿಗೆ ಇತಿಹಾಸದ ಅವಶ್ಯಕತೆ ಬೇಕಾಗಿಲ್ಲ. ಇಂದಿನ 4 ಜಿ ,5 ಜಿ ಕಾಲದಲ್ಲಿ ಯುವ ಜನತೆಗೆ ಬ್ಯೂಸಿಯಾಗಿದ್ದಾರೆ. ಭಾರತ ಭವ್ಯವಾಗಬೇಕಾದರೆ ಯುವಕರು ಇತಿಹಾಸ ತಿಳಿದುಕೊಳ್ಳುವುದು ಬಹಳ ಮಹತ್ವದಾಗಿದೆ. ತಂದೆ, ತಾಯಿ, ಬಂದು ಬಳಗ, ಗುರುಗಳನ್ನು ಪೂಜ್ಯನೀಯ ಭಾವದಿಂದ ನೋಡಿದರೆ ಅದಕ್ಕಿಂತ ದೊಡ್ಡ ಸೇವೆ ಬೇರೊಂದಿಲ್ಲ ಕಷ್ಟದಲ್ಲಿ ನಮ್ಮಗೆ ನೆರವಾಗುವವರೆ ಇವರು ಇದನ್ನು ತಿಳಿದು ಯುವಕರು ಜೀವನ ನಡೆಸಬೇಕಾಗಿದೆ. ಸತ್ಯ, ಇತಿಹಾಸ, ಶರಣರ ತತ್ವಗಳನ್ನು ನಾವು ಕೇಳಿಸಿಕೊಳ್ಳಬೇಕು. ಯಾರು ನಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ ಬದಲಾಗಿ ನಮ್ಮ ಶ್ರಮ ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತದೆ. ಅಂತಕರಣದಿಂದ ಮಾತ್ರ ಸಮಾಜ ಕಟ್ಟಲು ಸಾಧ್ಯ ಆ ದಿಸೆಯಲ್ಲಿ ಯುವ ಸಮುದಾಯ ಮುನ್ನಡೆಯಬೇಕು ಎಂದು ಪ್ರಭುಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಕಾರ್ಯಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಎಚ್.ಡಿ.ಪಾಟೀಲ ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಘಟಪ್ರಭಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಿ, ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯ ನಟ ಗಿಲ್ಲಿ ನಟ, ಮಿಮಿಕ್ರಿ ಗೋಪಿ ಹಾಗೂ ಶಶಿಕಲಾ ಸುನಿಲ್ ಅವರಿಂದ ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ , ಬಾಳಪ್ಪ ಬೆಳಕೂಡ, ಬಸವರಾಜ ಕಲ್ಯಾಣಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಶಶಿಧರ ದೇಮಶೆಟ್ಟಿ, ಅಧ್ಯಕ್ಷ ಬಸವರಾಜ ಕೊಟಗಿ, ಡಾ.ಸಂಜಯ ಶಿಂಧಿಹಟ್ಟಿ, ಬಸವರಾಜ ಮುರಗೋಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಆರ್.ಎಲ್.ಮಿರ್ಜಿ, ಶ್ರೀಮತಿ ಶೈಲಾ ಕೊಕ್ಕರಿ ನಿರೂಪಿಸಿ,ವಂದಿಸಿದರು.