ಗೋಕಾಕ:ಫೆಬ್ರವರಿ 1 ರಿಂದ 4 ರವರೆಗೆ 20ನೇ ಶರಣ ಸಂಸ್ಕೃತಿ ಉತ್ಸವ : ಶಶಿಧರ ದೇಮಶೆಟ್ಟಿ ಮಾಹಿತಿ

ಫೆಬ್ರವರಿ 1 ರಿಂದ 4 ರವರೆಗೆ 20ನೇ ಶರಣ ಸಂಸ್ಕೃತಿ ಉತ್ಸವ : ಶಶಿಧರ ದೇಮಶೆಟ್ಟಿ ಮಾಹಿತಿ
ಗೋಕಾಕ ಜ 29 : 20ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರವರಿ 1 ರಿಂದ 4 ರವರೆಗೆ ನಗರದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದ್ದು, ಫೆಬ್ರವರಿ 3 ರಂದು ಜರಗುವ ಮಹಿಳಾ ಸಮಾವೇಶದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖೇಲ ರತ್ನ ದೀಪಾ ಕರ್ಮಾಕರ ಅವರಿಗೆ ಕಾಯಕಶ್ರೀ ಪ್ರಶಸ್ತಿ ಜೊತೆಗೆ 1 ಲಕ್ಷ ರೂ ನಗದು ನೀಡಿ ಗೌರವಿಸಲಾಗುವುದು ಎಂದು ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷ ಶಶಿಧರ್ ದೇಮಶೆಟ್ಟಿ ಹೇಳಿದರು.
ಬುಧವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಫೆಬ್ರವರಿ 1 ಶನಿವಾರದಂದು ಮುಂಜಾನೆ 8 ಘಂಟೆಗೆ ನಗರದ ಶಾಲಾ ವಿದ್ಯಾರ್ಥಿಗಳಿಂದ ಅರಿವು, ಅಕ್ಷರ, ಆರೋಗ್ಯ ಕಲ್ನಾಡಿಗೆ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಬೆಳಿಗ್ಗೆ 8:30ಕ್ಕೆ ಷಟಸ್ಥಲ ಧ್ವಜಾರೋಹಣ ಜರುಗುವದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿವಾನಂದ ಮಹಾಸ್ವಾಮಿಗಳು, ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಧ್ವಜಾರೋಹಣವನ್ನು ಸಿಪಿಐ ಸುರೇಶ್ ಬಾಬು ನೆರವೇರಿಸುವರು. 10:30ಕ್ಕೆ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಪದವಿ ಸೇರಿದಂತೆ ಇತರ ಕೋರ್ಸಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಬೃಹತ್ ಉದ್ಯೋಗ ಮೇಳ ಮತ್ತು ಸ್ವಪ್ನಾ ಬುಕ್ಕ್ ಹೌಸ ಅವರಿಂದ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 30 ಕ್ಕೂ ಹೆಚ್ಚು ಉದ್ಯೋಗ ಸಮೂಹಗಳು ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆನಲೈನ ಮೂಲಕ ತಮ್ಮ ಹೆಸರುಗಳನ್ನು HTTPS://tinyurl.com/yne4jm54 ಗೆ ಸಂಪರ್ಕಿಸಿ ನೋಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಿ ಬಹುದು.
ಸಾಯಂಕಾಲ 6 ಘಂಟೆಗೆ ಹಾಸ್ಯ ಮತ್ತು ಸಂಗೀತ ಸಮಾವೇಶ ಈ ಕಾರ್ಯಕ್ರಮದದಿವ್ಯ ಸಾನಿಧ್ಯವನ್ನು ಅಥಣಿಯ ಪ್ರಭುಚನ್ನಬಸವ ಮಹಾಸ್ವಾಮಿಗಳು, ಘಟಪ್ರಭಾದ ಕೆಂಪಯ್ಯಸ್ವಾಮಿಮಠ ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ಕಾರ್ಯವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಈರಣ್ಣ ಕಡಾಡಿ, ಡಾ.ಎಚ್.ಡಿ ಪಾಟೀಲ, ಬಾಳಪ್ಪ ಬೆಳಕೂಡ, ಬಸವರಾಜ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಬಾಗವಹಿಸುವರು.
ರವಿವಾರ ದಿನಾಂಕ 2 ರಂದು ಸಾಯಂಕಾಲ 6 ಘಂಟೆಗೆ ಆರಕ್ಷಕರ ಸಮಾವೇಶ ಜರುಗಲಿದ್ದು, ಈ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು
ಬೈಲೂರು ನಿಷ್ಕಲಮಂಟಪ್ಪದ ಶ್ರೀ ನಿಜಗುಣಾನಂದ ತೋಂಟದಾರ್ಯ ಮಹಸ್ವಾಮಿಗಳು ವಹಿಸುವರು. ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಕುಮಾರ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಬಿದರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ ಮಾರ್ಬಾನಿಯಾಂಗ್ , ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ , ಡಿವಾಯ್ಎಸ್.ಪಿಗಳಾದ .ಡಿ.ಟಿ ಪ್ರಭು, ಡಿ.ಎಚ್.ಮುಲ್ಲಾ ಭಾಗವಹಿಸುವರು.
ಸೋಮವಾರ ದಿನಾಂಕ 3 ರಂದು ಸಾಯಂಕಾಲ 6 ಘಂಟೆಗೆ ಮಹಿಳಾ ಸಮಾವೇಶ ಜರುಗಲಿದ್ದು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು
ವಹಿಸಲಿದ್ದು, ಇದೇ ಸಂದರ್ಭದಲ್ಲಿ ಪದ್ಮಶ್ರೀ ದೀಪಾ ಕರ್ಮಾಕರ ಅವರಿಗೆ ” ಕಾಯಕಶ್ರೀ” ಪ್ರಶಸ್ತಿಯ ಜೊತೆಗೆ ನಗದು 1 ಲಕ್ಷರೂ ಗಳನ್ನು ನೀಡಿ ಗೌರವೌಸಲಾಗುವುದು. ಶ್ರೀಮತಿ ವಿದ್ಯಾ ಮರಕುಂಬಿ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ವಹಿಸುವರು.ಮುಖ್ಯ ಅಥಿತಿಗಳಾಗಿ ಮೀನಾಕ್ಷಿ ಬಾಳಿ, ಶೋಭಾ ಗಸ್ತಿ, ವೀಣಾ ಕವಟಗಿಮಠ ,ಡಾ ಸೋನಾಲಿ ಸರ್ನೋಬತ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.
ದಿನಾಂಕ 4 ಮಂಗಳವಾರದಂದು ಮುಂಜಾನೆ ಶ್ರೀಮಠದ ಕರ್ತೃ ಗದುಗೆಗೆ ಬಿಲ್ವಾರ್ಚಣೆ ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವವು ಜರುಗುವದು.
ಸಾಯಂಕಾಲ 6 ಘಂಟೆಗೆ ನಡೆಯಲಿರುವ ಯುವ ಸಮಾವೇಶದ ದಿವ್ಯ ಸಾನಿಧ್ಯವನ್ನು ಶಿವಾನಂದ ಮಹಾಸ್ವಾಮಿಗಳು ವಹಿಸುವರು,
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ನೆರವೇರಿಸುವರು. ಅಧ್ಯಕ್ಷತೆಯನ್ನು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಂಜುನಾಥ್ ಬಿ., ತಹಶೀಲ್ದಾರ ಡಾ.ಮೋಹನ್ ಭಸ್ಮೆ, ಲೋಕೇಶ್ವರ ನಾಯಕ, ಫೃಥ್ವಿ ಕುಮಾರ್, ಮಹಾಂತೇಶ ಕಡಾಡಿ, ಶಂಕರ ಗೋರೋಶಿ ಆಗಮಿಸುವರು.
ಪ್ರತಿದಿನದ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಪ್ರತಿದಿನ ಸಂಜೆ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶರಣರಿಗೆ ಗೌರವ ಸನ್ಮಾನ ನೆರವೇರುವುದು. ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ದೇಮಶೆಟ್ಟಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ಬಸವರಾಜ ಕೋಟಗಿ, ಕಾರ್ಯದರ್ಶಿ ಡಾ.ಸಂಜಯ ಶಿಂಧಿಹಟ್ಟಿ, ಬಸವರಾಜ ಮುರಗೋಡ, ಸದಾಶಿವ ಗುದುಗಗೋಳ , ಆರ್.ಎಲ್.ಮಿರ್ಜಿ , ಶ್ರೀಮತಿ ಭಾರತಿ ಮರೆನ್ನವರ ಉಪಸ್ಥಿತರಿದ್ದರು.