RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ

ಗೋಕಾಕ:ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ 

ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ

ಗೋಕಾಕ ನ 1 : ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸುವಂತೆ ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಬುಧವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಕರವೇ ಗೋಕಾಕ ತಾಲೂಕು ಘಟಕದ ವತಿಯಿಂದ ಕರವೇ ಸದಸ್ಯತ್ವ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ “ನಾನು ಕರವೇ ಕಾರ್ಯಕರ್ತ” ಸದಸ್ಯತ್ವ ಅಭಿಮಾನ ಕಾರ್ಯಕ್ರಮದಲ್ಲಿ ಸದಸ್ಯತ್ವ ಪ್ರಚಾರ ಭಿತ್ತಿ ಪತ್ರ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ನಮ್ಮ ಜೀವನ , ಸಮಾಜ ,ಸಂಸ್ಕೃತಿಯಾಗಿದ್ದು, ಅದನ್ನು ಎಲ್ಲ ಕನ್ನಡ ಮನಸ್ಸುಗಳಲ್ಲಿ ಅಭಿಮಾನ ಮೂಡಿಸಬೇಕು‌ ಒಂದು ತಿಂಗಳ ಈ ಅಭಿಯಾನದಲ್ಲಿ ಕನ್ನಡಿಗರನ್ನು ಜಾಗೃತಿಗೋಳಿಸಿ ಅವರಲ್ಲೂ ಭಾಷಾಭಿಮಾನವನ್ನು ಮೂಡಿಸಬೇಕು. ಕನ್ನಡವೇ ನಮ್ಮ ಉಸಿರಾಗಿದ್ದು, ಅದರ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಕರವೇ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು
ಸಾನಿಧ್ಯವನ್ನು ವಹಿಸಿ ಮಾತನಾಡಿದ ಶೂನ್ಯ ಸಂಪಾದನಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಕನ್ನಡ ಪರ ಹೋರಾಟದ ಛಲದಿಂದ ನಾರಾಯಣಗೌಡರು ಹೋರಾಡುತ್ತಾ ಇತಿಹಾಸ ನಿರ್ಮಿಸಿದ್ದಾರೆ‌. ಅವರ ಪ್ರಯತ್ನದಿಂದಲೇ ಕರವೇ ಕರ್ನಾಟಕದ ಗಟ್ಟಿ ಸಃಘಟನೆಯಾಗಿ ಬೆಳೆಯುತ್ತಿದೆ. ಎಲ್ಲಾ ಕಾರ್ಯಕರ್ತರು ಅವರಿಗೆ ಕೈ ಜೊಡಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಕನ್ನಡ ಸಂಸ್ಕೃತಿ, ಭಾಷೆ ಕುರಿತು ಜನರಲ್ಲಿ ಅಭಿಮಾನ ಬೆಳೆಸಿ ನೂತನ ಸದಸ್ಯರನ್ನಾಗಿ ಮಾಡಿಕೊಳ್ಳಿ, ಇದರಿಂದ ವೇದಿಕೆ ಮತ್ತಷ್ಟು ಬಲಿಷ್ಠವಾಗುತ್ತದೆ‌. ಗೋಕಾಕ ಕರವೇ ಘಟಕ ನಾಡು, ನುಡಿ, ಪರಿಸರ ರಕ್ಷಣೆ ಯಂತಹ ಜನಪರ ಹೋರಾಟಗಳ ಮೂಲಕ ಮಾದರಿಯಾಗಿ ಕಾರ್ಯಮಾಡುತ್ತಿದೆ. ಇಲ್ಲಿ ಜಾತಿ, ಧರ್ಮ ಮುಖ್ಯವಲ್ಲ ಕನ್ನಡಾಭಿಮಾನ ಒಂದೇ ಮುಖ್ಯ. ಶರಣರು, ದಾಸರು, ವಿದ್ವಾಂಸರು, ಕನ್ನಡ ನಾಡನ್ನು ದೇವಾಲಯದಂತೆ ಬೆಳೆಸಿದ್ದು, ಅದನ್ನು ಉಳಿಸುವ ಕಾರ್ಯ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು ಕನ್ನಡದ ಬಗ್ಗೆ ಆಸಕ್ತಿ ಇದ್ಧವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಅಭಿಮಾನದ ವ್ಯಕ್ತಿಗಳನ್ನು ಕರವೇ ಸಂಘಟನೆಯಲ್ಲಿ ಸೇರಿಸಕೊಂಡು ಗೋಕಾಕ ನಾಡಿನ ಜನರಿಗೆ ಅನುಕೂಲ ವಾಗುವಂತಹ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರವೇ ಸದಸ್ಯತ್ವ ಗೀತೆಯನ್ನು ಸಂಯೋಜನೆ ಗೊಳಿಸಿದ ಕಲಾವಿದ ಶಿವಾಜಿ ಪಾಟೀಲ್ ಅವರನ್ನು ಗೌರವಿಸಿ , ಸತ್ಕರಿಸಲಾಯಿತು.

ವೇದಿಕೆಯಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಶಿಕ್ಷಕ ರಾಮಚಂದ್ರ ಕಾಕಡೆ, ಸಾದಿಕ ಹಲ್ಯಾಳ ಉಪಸ್ಥಿತರಿದ್ದರು.

Related posts: