RNI NO. KARKAN/2006/27779|Tuesday, December 3, 2024
You are here: Home » breaking news » ಬೆಳಗಾವಿ : ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಲು ಕರವೇ ಆಗ್ರಹ

ಬೆಳಗಾವಿ : ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಲು ಕರವೇ ಆಗ್ರಹ 

ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಲು ಕರವೇ ಆಗ್ರಹ

ಬೆಳಗಾವಿ ನ 30 – ಬೆಳಗಾವಿ ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ,ರಾಜಕೀಯ ಲಾಭಕ್ಕಾಗಿ ಮುಗ್ದ ಮರಾಠಿ ಭಾಷಿಕರರನ್ನು ಪ್ರಚೋದಿಸಿ ಬೆಳಗಾವಿಯ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಿ, ಅಧಿವೇಶನದ ಸಂಧರ್ಭದಲ್ಲಿ ಮರಾಠಿ ಮೇಳಾವ್ ಮಾಡಿ, ಕನ್ನಡಿಗರು ಸಂಭ್ರಮ ಪಡುವ ಸಂಧರ್ಭದಲ್ಲಿ ಪದೇ ಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಿ ಅವರನ್ನು ಗಡಿಪಾರು ಮಾಡುವ ಮೂಲಕ ಸರ್ಕಾರ ಕನ್ನಡದ ಹಿತವನ್ನು ಕಾಯಬೇಕು, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ನಿರ್ಣಯವನ್ನು ಕೈಗೊಳ್ಳಬೇಕೆಂದು ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯೋತ್ಸವದ ದಿನ ಎಂಇಎಸ್ ಸಂಘಟನೆಗೆ ಕರಾಳ ದಿನಾಚರಣೆ ಮಾಡಲು ಅವಕಾಶ ನೀಡುವದಿಲ್ಲ ಎಂದು ರಾತ್ರೋರಾತ್ರಿ ಅನುಮತಿ ಕೊಡುತ್ತಲೇ ಬಂದಿರುವ ಸರ್ಕಾರ ಕನ್ನಡಿಗರನ್ನು ವಂಚಿಸುತ್ತಿದೆ. ಈಗ ಅಧಿವೇಶನದ ಸಂಧರ್ಭದಲ್ಲಿ ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿರುವ ನಾಡದ್ರೋಹಿ ಎಂಇಎಸ್ ಮರಾಠಿ ಮೇಳಾವ್ ನಡೆಸಲು ಮುಂದಾಗಿದ್ದು ಸರ್ಕಾರ ಯಾವುದೇ ಕಾರಣಕ್ಕೂ ಮೇಳಾವ್ ಗೆ ಅನುಮತಿ ನೀಡಬಾರದು, ಈ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮೌನ ಮುರಿದು ಎಂಇಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು.ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಎಂಇಎಸ್ ಸಂಘಟನೆಗೆ ನಾಡದ್ರೋಹಿ ಚಟುವಟಿಕೆ ಮಾಡಲು ಅನುಮತಿ ನೀಡುವದಿಲ್ಲ ಎಂದು ರಾತ್ರೋರಾತ್ರಿ ಅನುಮತಿ ಕೊಡುವ ಮೂಲಕ ಕನ್ನಡಿಗರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವರ್ತನೆಯಿಂದ ಕನ್ನಡಿಗರು ಸಹನೆ ಕಳೆದುಕೊಂಡಿದ್ದು ಎಂಇಎಸ್ ನಾಯಕರಿಗೆ ಅಧಿವೇಶನದ ಪ್ರತಿಯಾಗಿ ಮರಾಠಿ ಮೇಳಾವ್ ನಡೆಸಲು ಅನುಮತಿ ನೀಡಿದರೆ,ಕರವೇ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಮಾಡುತ್ತದೆ ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದು ಎಂಇಎಸ್ ವಿಚಾರದಲ್ಲಿ ರಾಜ್ಯದ ಎಲ್ಲ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು,ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಲಗಾಮು ಹಾಕುವ ಐತಿಹಾಸಿಕ ನಿರ್ಣಯ ಕೈಗೊಳ್ಳಬೇಕು ಎಂದು ಕರವೇ ಆಗ್ರಹಪಡಿಸಿದೆ.

Related posts: