RNI NO. KARKAN/2006/27779|Monday, February 17, 2025
You are here: Home » breaking news » ಗೋಕಾಕ:ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿಯಾಗಿವೆ : ಡಾ.ಶರಣಪ್ಪ ಗಡೇದ

ಗೋಕಾಕ:ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿಯಾಗಿವೆ : ಡಾ.ಶರಣಪ್ಪ ಗಡೇದ 

ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿಯಾಗಿವೆ : ಡಾ.ಶರಣಪ್ಪ ಗಡೇದ

ಗೋಕಾಕ ನ 24 : ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಪ್ಪ ಗಡೇದ ಹೇಳಿದರು

ರವಿವಾರದಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವದರಿಂದ ಮುಂದೆ ಬರುವ ರೋಗಗಳನ್ನು ತಡೆಯಬಹುದು. ಆರೋಗ್ಯವಂತ ಸಮಾಜ ನಿರ್ಮಿಸಲು ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಇಂದಿನ ಒತ್ತಡ ಜೀವನದಲ್ಲಿ ಆರೋಗ್ಯ ಕಾಪಡಿಕೊಳ್ಳುವದು ಕಷ್ಟ ಸಾಧ್ಯವಾಗಿದ್ದು, ಅತಿಯಾದ ಮೊಬೈಲ್ ಬಳಕೆಯು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಅದನ್ನು ಮಿತವಾಗಿ ಬಳಸಬೇಕು. ಪ್ರತಿರೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು‌. ಇಂದಿನ ಆಹಾರ ಪದ್ಧತಿಯಿಂದಲೂ ಸಹ ರೋಗಗಳು ಹೆಚ್ಚಾಗುತ್ತಿವೆ. ನಮ್ಮ ದೈಹಿಕ ಕಾರ್ಯಗಳು ,ವ್ಯಾಯಾಮ ಸೇರಿದಂತೆ ಇತರ ಚುಟುವಟಿಕೆಗಳನ್ನು ದಿನನಿತ್ಯ ಮಾಡಿದರೆ ಆರೋಗ್ಯವಂತರಾಗಬಹುದು. ಕೆಲವೊಂದು ಕಾಯಿಲೆಗಳು ಮಾನವನಿಗೆ ಮಾರಕವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದ ಅವರು ಇಂತಹ ಆರೋಗ್ಯ ಶಿಬಿರದಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸಿ ಆರೋಗ್ಯವಂತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಇಲ್ಲಿನ ಮುಪ್ಪಯ್ಯ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಮಾಜಿ ಜಿಪಂ ಸದಸ್ಯರುಗಳಾದ ಟಿ.ಆರ್‌.ಕಾಗಲ್, ಮಡೆಪ್ಪ ತೋಳಿನವರ, ಗ್ರಾ.ಪಂ ಸದಸ್ಯ ಸುರೇಶ್ ಸನದಿ, ಮಾಜಿ ನಗರಾಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಸಂಜಯ ಹೋಸಮಠ ಪ್ರಕಾಶ ಕಂಬಿ ಉಪಸ್ಥಿತರಿದ್ದರು.

Related posts: