ಬೆಳಗಾವಿ :ಕಾಂಗ್ರೆಸ್ ಸಮಾವೇಶಕ್ಕೆ 2 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಗುರಿ : ಸಚಿವ ರಮೇಶ ಮಾಹಿತಿ

ಕಾಂಗ್ರೆಸ್ ಸಮಾವೇಶಕ್ಕೆ 2 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಗುರಿ : ಸಚಿವ ರಮೇಶ ಮಾಹಿತಿ
ಬೆಳಗಾವಿ ಜೂ 27: ಜೂ 30 ರಂದು ಜಿಲ್ಲೆಯ ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜರಗುವ ಕಾಂಗ್ರೆಸ್ ಸಮಾವೇಶಕ್ಕೆ ಸುಮಾರು 2 ಲಕ್ಷ ಕಾರ್ಯಕರ್ತರನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ತಿಳಿಸಿದ್ದಾರೆ
ಈ ಕುರಿತು ನಮ್ಮ ಬೆಳಗಾವಿ ಇ – ವಾರ್ತೆ ಗೆ ಮಾಹಿತಿ ನೀಡಿರುವ ಅವರು, ಕಾರ್ಯಕರ್ತರ ಸಂಘಟನೆಯ ಉದ್ದೇಶದಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಪ್ರತಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರುವ ಹೊಣೆ ಪಕ್ಷದ ಪದಾಧಿಕಾರಿಗಳ ಮೇಲಿದ್ದು, ಸರ್ಕಾರದ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು