RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ರಸ್ತೆ ಸುರಕ್ಷತಾ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು : ಸಿಪಿಐ ಸುರೇಶ್ ಬಾಬು

ಗೋಕಾಕ:ರಸ್ತೆ ಸುರಕ್ಷತಾ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು : ಸಿಪಿಐ ಸುರೇಶ್ ಬಾಬು 

ರಸ್ತೆ ಸುರಕ್ಷತಾ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು : ಸಿಪಿಐ ಸುರೇಶ್ ಬಾಬು

ಗೋಕಾಕ ನ 11 : ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದು ಅವುಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು ಎಂದು ಸಿಪಿಐ ಸುರೇಶ್ ಬಾಬು ಹೇಳಿದರು

ಸೋಮವಾರದಂದು ನಗರದ ಸಿಪಿಐ ಕಛೇರಿಯಲ್ಲಿ ಕರವೇ ಕಾರ್ಯಕರ್ತರಿಂದ ಸತ್ಕಾರ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕ ಮಾಹಿತಿ, ಜಾಗೃತಿ ಚಟುವಟಿಕೆಗಳು ಪರಿಣಾಮಕಾರಿ ಯಾಗಿ ನಡೆಯಬೇಕು ಇದಕ್ಕೆ ತಾಲೂಕಿನ ಎಲ್ಲಾ ಸಂಘಟನೆಯವರು ಸಹಕಾರ ನೀಡಬೇಕು ಎಂದ ಅವರು ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ ಫ‌ಲಕಗಳನ್ನು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫ‌ಲಕ, ಅಳವಡಿಸಬೇಕು. ನಿರಂತರ ಅರಿವಿನ ಚಟುವಟಿಕೆಗಳು ನಡೆಯಬೇಕು ಇದಕ್ಕೆ ಕರವೇ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ರಾಜೇಂದ್ರ ಕೆಂಚನಗುಡ್ಡ, ರಹೆಮಾನ ಮೋಕಾಶಿ, ಬಸವರಾಜ ಮನವಡ್ಡರ, ಶಿವಾನಂದ ಕಂಡ್ರಿ, ಲಕ್ಕಪ್ಪ ನಂದಿ, ಪ್ರವೀಣ್ ಗೋಳಬಾಳ, ದಸ್ತಗಿರಿ ಶೇಖಬಡೆ, ಸತೀಶ ಗಣಾಚಾರಿ, ಹನುಮಂತ ಉಪ್ಪಾರ, ಸಿದ್ದು ಖಾನಪ್ಪನವರ ಇದ್ದರು

Related posts: