RNI NO. KARKAN/2006/27779|Saturday, October 5, 2024
You are here: Home » breaking news » ಗೋಕಾಕ:ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ

ಗೋಕಾಕ:ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ 

ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ

ಗೋಕಾಕ ಸೆ, 16 :- ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನವಾಗಿದ್ದು, ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ, ಸರ್ವರಿಗೂ ದಾರಿದೀಪವಾಗಿವೆ ಎಂದು ಬೆಂಗಳೂರಿನ ನಿವೃತ್ತ ಪ್ರಾದ್ಯಾಪಕ ಎಚ್.ಎನ್.ಮುರಳೀಧರ ಹೇಳಿದರು.
ಅವರು, ರವಿವಾರದಂದು ನಗರದ ಮಯೂರ ಸ್ಕೂಲ್ ಸಭಾಭವನದಲ್ಲಿ ಇಲ್ಲಿಯ ಶ್ರೀ ರಾಮಕೃಷ್ಣ ಸತ್ಸಂಗ ಕೇಂದ್ರದವರು ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು.
ಧರ್ಮದ ಅನುಷ್ಠಾನ ಇರುವುದು ಬ್ರಾತ್ವತ್ವದಲ್ಲಿ. ಜಗತ್ತಿನಲ್ಲಿ ಇರುವವರೆಲ್ಲಾ ನಮ್ಮವರೇ. ಸರ್ವ ಸಮಾನತೆ ಇಂದಿನ ಜಗತ್ತಿಗೆ ಬೇಕಾಗಿದೆ. ಇಂದಿನ ಪರಿಸ್ಥಿತಿಗೆ ಪರಿಹಾರ ಶ್ರೀ ರಾಮಕೃಷ್ಣ, ಶಾರದಾ ಮಾತೆ ಹಾಗೂ ವಿವೇಕಾನಂದರ ಸಂದೇಶಗಳಿಂದ ಸಾಧ್ಯವಿದ್ದು, ಅವರ ಆದರ್ಶಗಳನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜರು ಆಶೀರ್ವಚನ ನೀಡುತ್ತ, ಆಧ್ಯಾತ್ಮಿಕ ವಸ್ತು ನಮ್ಮಲ್ಲೇ ಇದ್ದು, ಅದನ್ನು ಅರಿತರೆ ಭಗವಂತನನ್ನು ಅರಿಯಬಹುದು. ನಂಬಿಕೆಯ ಜೊತೆ ಶೃದ್ಧೆ ಇರಬೇಕು. ಶೃದ್ಧೆಯಿಂದ ಸಾಧನೆ ಸಾಧ್ಯ. ನಾನು ಎಂಬುವುದನ್ನು ತೊರೆದು ಬದುಕುವಂತೆ ಹೇಳಿದರು.
ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಡಾ. ದತ್ತಾತ್ರೇಯ ವೇಲನಕರ ಅವರಿಂದ ವಿಶೇಷ ಭಜನೆ ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ಸತ್ಸಂಗದವರು ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜರನ್ನು ಸತ್ಕರಿಸಿದರು.

Related posts: