RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು

ಗೋಕಾಕ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು 

ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು
ಗೋಕಾಕ ಜು 29 : ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ತೆರೆದಿರುವ ಕಾಳಜಿ ಕೇಂದ್ರ ಹಾಗೂ ಅವಟಿಗಲ್ಲಿಯ ಪ್ರವಾಹ ಪೀಡಿತ ಜನರಿಗೆ ಇಲ್ಲಿನ ಅಂಜುಮನ್ -ಎ -ಇಸ್ಲಾಂ ಕಮಿಟಿ ವತಿಯಿಂದ ರವಿವಾರದಂದು ಸಾಯಂಕಾಲ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು .

ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್-ಎ -ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ ನಗರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಶಾಸಕ ರಮೇಶ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು, ಸಂಘ ಸಂಸ್ಥೆಗಳು ಸಹ ಸಹಕಾರ ನೀಡುತ್ತಿದ್ದು, ಯಾರು ಭಯಪಡದೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡು ತಾಲೂಕು ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸುರೇಶ್ ಸನದಿ, ನಗರಸಭೆ ಸದಸ್ಯ ಬಸವರಾಜ ಆರೆನ್ನವರ, ಮುಖಂಡರುಗಳಾದ ವಿಜಯ ಜತ್ತಿ, ಬಸವರಾಜ ದೇಶನೂರ, ಗಫಾರ ಕಾಗಜಿ, ರಫೀಕ್ ಗುಡವಾಲೆ, ಇಸ್ಮಾಯಿಲ್ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: