ಗೋಕಾಕ:ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ

ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ
ಗೋಕಾಕ ಜೂ 26 : ನಗರಸಭೆಯಿಂದ ಹೆಸ್ಕಾಂ ಇಲಾಖೆಯ ಮೇಲ್ವಿಚಾರಣೆಯಲ್ಲಿ 1.8ಕೋಟಿ ರೂಗಳ ವೆಚ್ಚದಲ್ಲಿ ನಾಕಾ ನಂ1 ರಿಂದ ಬಸವೇಶ್ವರ ವೃತ್ತದ ವರೆಗೆ ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ಧುರೀಣ ಅಮರನಾಥ ಜಾರಕಿಹೊಳಿ, ನಗರಸಭೆ ಸದಸ್ಯರಾದ ಜಯಾನಂದ ಹುಣಚ್ಯಾಳ, ಬಸವರಾಜ ಆರೇನ್ನವರ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ವಿಜಯ ಜತ್ತಿ, ಮಹ್ಮದಯುಸುಫ ಅಂಕಲಗಿ, ಅಬ್ದುಲಸತ್ತಾರ ಶಭಾಶಖಾನ, ಸಂತೋಷ ಮಂತ್ರಣ್ಣವರ, ಬಸವರಾಜ ದೇಶನೂರ, ಹೆಸ್ಕಾಂನ ಎಸ್ ಪಿ ವರಾಳೆ, ನಗರಸಭೆಯ ವಿನೋದ ಪಾಟೀಲ, ಎಮ್ ಎಚ್ ಗಜಾಕೋಶ, ರಮೇಶ ಕೊಣಿ, ಗುತ್ತಿಗೇದಾರ ಸುರೇಶ ಹುಲಿಕಟ್ಟಿ ಇದ್ದರು.