ಗೋಕಾಕ:ಗೋಕಾಕದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಶಾಂತಿ ಸಭೆ
ಗೋಕಾಕದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಶಾಂತಿ ಸಭೆ
ಗೋಕಾಕ ಜೂ 6 : ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ನಗರ ಶಹರ ಠಾಣೆಯಲ್ಲಿ ಬುಧವಾರದಂದು ಸಂಜೆ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಇನ್ಸ್ ಪೆಕ್ಟರ್ ಜಾನಾರ ಅವರು, ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ. ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ. ಹೀಗಾಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು. ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು. ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದ್ದು, ಸಭೆಯಲ್ಲಿನ ಮುಖಂಡರು ಯುವಕರಿಗೆ ತಿಳಿ ಹೇಳಬೇಕು ಎಂದ ಅವರು ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಎಸ್ .ಐ. ಕೆ.ವಾಲಿಕರ ಹಾಗೂ ಸಿಬ್ಬಂದಿ ಇದ್ದರು.ಈ ವೇಳೆ ಅಂಜುಮನ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ, ಕಾರ್ಯದರ್ಶಿ ಜುಬೇರ ತರಾಸಗರ, ಹಾಜಿ ಗಫಾರ ಕಾಗಜಿ, ಅಲ್ಲಾಭಕ್ಷ ಮುಲ್ಲಾ, ಎಸ್ ಎಂ.ಮುಲ್ಲಾ, ಇಸ್ಮಾಯಿಲ್ ಜಮಾದಾರ, ರಿಯಾಜ ಗೋಕಾಕ , ಕಯ್ಯೂಮ ಖೈರದಿ ಸೇರಿದಂತೆ ಅನೇಕ ಮುಖಂಡರಿದ್ದರು.