RNI NO. KARKAN/2006/27779|Sunday, November 2, 2025
You are here: Home » breaking news » ಗೋಕಾಕ:ವಿಶ್ವಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ

ಗೋಕಾಕ:ವಿಶ್ವಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ 

ವಿಶ್ವಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ

ಅಡಿವೇಶ ಮುಧೋಳ.ಬೆಟಗೇರಿ

ಇದೇ ಸೆ.13, 14 ರಂದು ಡಾ. ಶಿವಾನಂದ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ 34 ನೇಯ ಸತ್ಸಂಗ ಸಮ್ಮೇಳನ ಪ್ರವಚನ ಕಾರ್ಯಕ್ರಮ ನಡೆಯಲಿದೆ ತನ್ನನಿಮಿತ್ಯ ಈ ಲೇಖನ.
ಗೋಕಾಕ ತಾಲೂಕಿನ ಬೆಟಗೇರಿ ಪುಟ್ಟಗ್ರಾಮವಾದರೂ ಕಲೆ, ಸಾಹಿತ್ಯ, ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಆನಂದಕಂದ ಕಾವ್ಯನಾಮದಿಂದ ನಾಡಿನಾದ್ಯಂತ ಚಿರಪರಿಚಿತರಾದ ಡಾ. ಬೆಟಗೇರಿ ಕೃಷ್ಣಶರ್ಮರ ಹುಟ್ಟೂರುವೂ ಹೌದು. ಸುಮಾರು ನಾಲ್ಕೈದು ಶತಮಾನಗಳ ಹಿಂದೆಯೇ ನಾಡಿನ ಹೆಸರಾಂತ ಶರಣ, ಸಾಧು, ಸಂತ ಹಾಗೂ ಮಹಾತ್ಮರ ಪಾದಸ್ಪರ್ಶ ಮಾಡಿದ್ದರಿಂದ ಇಲ್ಲಿ ಅದ್ವೈತದ ಕಂಪು ಸದಾಸೂಸುತ್ತಾ ಇಲ್ಲಿಯ ಭೂಮಿ ಪುಣ್ಯಕ್ಷೇತ್ರವಾಗಿದೆ.
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮೌನಯೋಗಿ ಗುರುನಾಥರೂಢರು, ಮುಗಳಖೋಡದ ಯಲ್ಲಾಲಿಂಗ ಮಹಾಸ್ವಾಮಿಜಿ ಸೇರಿದಂತೆ ಹಲವಾರು ಜನ ಶರಣರು, ಮಹಾತ್ಮರು ಈ ಪುಟ್ಟ ಗ್ರಾಮಕ್ಕೆ ಆಗಾಗ ಬಂದು ಪಾದಸ್ಪರ್ಶ ಮಾಡಿದ ಸಾಕಷ್ಟು ಉಲ್ಲೇಖಾರ್ಹ ಪುರಾವೆಗಳಿವೆ.
ಪ್ರವಚನ ಕಾರ್ಯಕ್ರಮ: ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಅದ್ವೈತ್, ಶಿವಭಜನೆಗೈಯುತ್ತಾ, ಸ್ಥಳೀಯ ಈಶ್ವರ ಭಜನಾ ಮಂಡಳಿ ಅವರ ಸಾರಥ್ಯದಲ್ಲಿ ಉಪಮಾತೀತ ಸದ್ಗುರು ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿಯವÀರ ಘನ ಅಧ್ಯಕ್ಷತೆಯಲ್ಲಿ ಕಳೆದ 33 ವರ್ಷಗಳಿಂದ ಸತತ ಸತ್ಸಂಗ ಸಮ್ಮೇಳನ ಆಯೋಜಿಸಿ, ಅದ್ವೈತ ಸಂಪ್ರದಾಯದ ನಾಡಿನ ಹೆಸರಾಂತ ಮಹಾತ್ಮ್ನ, ಸಾಧು ಸತ್ಪುರುಷರನ್ನು ಗ್ರಾಮಕ್ಕೆ ಕರೆತಂದು ಸ್ಥಳೀಯರಲ್ಲಿ ಅಜ್ಞಾನದ ಅಂದಕಾರ ಕಳೆದು, ಸುಜ್ಞಾನದ ಜ್ಞಾನೂದಯ ಮಾಡಿಸುತ್ತಿರುವ ಇಲ್ಲಿಯ ಈಶ್ವರ ಭಜನಾ ಮಂಡಳಿಯವರ ಕಾರ್ಯ ಅವಸ್ಮರಣೀಯವಾಗಿದೆ. ಹೀಗಾಗಿ ಸದ್ಗುರು ಶಿವಾನಂದ ಭಾರತಿ ಶ್ರೀಗಳು ಗ್ರಾಮದ ಭಕ್ತರ ಕಾಮಧೇನು ಎನಿಸಿಕೊಂಡಿದ್ದಾರೆ.
ಸತತ 34 ವರ್ಷಗಳಿಂದ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಸತ್ಸಂಗ ಸಮ್ಮೇಳನ ಆಯೋಜಿಸುತ್ತಿರುವದೇ ಭಾರತಿ ಶ್ರೀಗಳ ಮೇಲೆ ಇಟ್ಟಿರುವ ಪ್ರೀತಿ, ಭಕ್ತಿಯೇ ಸಾಕ್ಷಿ. ಗ್ರಾಮದ ಈಶ್ವರ ದೇವಸ್ಥಾನದಲ್ಲಿ 34 ನೇ ಸತ್ಸಂಗ ಸಮ್ಮೇಳನವೂ ಸಹ ಭಾರತಿ ಸ್ವಾಮಿಜಿ ಅವರ ಘನ ಅಧ್ಯಕ್ಷತೆಯಲ್ಲಿ ಇದೇ ಸೆ.13, 14 ರಂದು ಪ್ರವಚನ ಕಾರ್ಯಕ್ರಮ ನಡೆಯಲಿದೆ. ನಾಡಿನ ಹಲವಾರು ಜನ ಸಾಧು, ಸಂತರು, ಮಹಾತ್ಮರು, ಶರಣರು ದರ್ಶನಾರ್ಶೀವಾದ ನೀಡಲಿರುವರು.
ಶಿವಾನಂದ ಭಾರತಿ ಶ್ರೀಗಳ ಹಿನ್ನಲೆ: ಆಧ್ಯಾತ್ಮಿಕ ಪರಂಪರೆಯ ತವರೂರಾದ ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲದ ಶಿವಯೋಗಿಶ್ವರ ಮಠದ ಮಠಾಧೀಶ ವಿಶ್ವ ಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ ಅವರು ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲಸಿರಿ ಅಮೃತವಾಣಿಯನ್ನು ವಿಶ್ವದ ಒಳತಿಗಾಗಿ, ವಿಶ್ವ ಪ್ರೇಮ ಸಾರಲು ವಿಶ್ವ ಮಾನವರೆಲ್ಲರಿಗೊ ವಿನಯ, ಸಮಭಾವದಿಂದ ಬೆರೆತು ಬಾಳಲು ನಾಡಿನಾದ್ಯಂತ ಸಂಚರಿಸಿ ಉಪದೇಶ ನೀಡುವ ಕಾರ್ಯ ಸ್ಮರಣೀಯವಾಗಿದೆ.
ಗುರು ಮಡಿವಾಳೇಶ್ವರರ ಕೃಪಾರ್ಶೀವಾದದಿಂದ, ಸಾತ್ವಿಕ ಮನೆತನದ ಬಸವಣಪ್ಪ-ಗಂಗಮ್ಮ ಆದರ್ಶ ದಂಪತಿಗಳ ಉದರದಲ್ಲಿ 1940 ಜನೇವರಿ 20 ರಂದು ಬೈಲಹೊಂಗಲ ತಾಲೂಕಿನ ಬಾವಿಹಾಳ ಪುಟ್ಟ ಗ್ರಾಮದಲ್ಲಿ ಜನಸಿದರು. ಶ್ರೀಗಳ ಬಾಲ್ಯದ ಹೆಸರು ಮಡಿವಾಳಪ್ಪ. ತಮ್ಮ ಮನೆಗೆ ಬರುತ್ತಿದ್ದ ಶರಣ, ಸ್ವಾಮಿಜಿಗಳ ಪ್ರಭಾವದಿಂದ ಹಾಗೂ ಬಾಲ್ಯದಲ್ಲಿಯೇ ಮಠ ಮಾನ್ಯಗಳಲ್ಲಿ ಕಾಲಕಳೆಯುತ್ತಿದ್ದ ಮಡಿವಾಳಪ್ಪ ಆಧ್ಯಾತ್ಮ ಶಿಕ್ಷಣದ ಕಡೆಗೆ ಹೆಚ್ಚು ಗಮನ. ಸಮೀಪದ ದೇವರ ಶೀಗಿಹಳ್ಳಿಯಲ್ಲಿ ತ್ರೀಕರಣಪೂರ್ವಕ ಸೇವೆ ಸಲ್ಲಿಸುತ್ತಾ ಎಲ್ಲರ ಅಚ್ಚು ಮೆಚ್ಚಿನವರಾಗಿದ್ದರು.
ವಿಶ್ವಕುಟುಂಬಿ ವಿದ್ಯಾಭ್ಯಾಸ: ಶ್ರೀಗಳು ಹುಟ್ಟೂರು ಬಾವಿಹಾಳದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಸಮೀಪದ ದೇವರ ಶೀಗಿಹಳ್ಳಿಯಲ್ಲಿ 7 ನೇ ತರಗತಿ 1953 ರಲ್ಲಿ ಪೂರೈಸಿದ ಈ ಬಾಲಕನ ಆಧ್ಯಾತ್ಮ ಹಸಿವನ್ನು ಅಥೈಸಿದ ಗುರುಗಳು ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿಯೇ ಶಿಕ್ಷಣ ಮುಂದುವರಿಸುವಂತೆ ಬಿಟ್ಟು ಬಂದರು. ಮೌನಯೋಗಿ ಗುರುನಾಥರೂಢರ ಸೇವೆ ಸಲ್ಲಿಸಿದ ಅವರು ಅಚ್ಚುಮೆಚ್ಚಿನ ಶಿಷ್ಯರಾಗಿ ಕೃಪಾರ್ಶೀವಾದಕ್ಕೆ ಪಾತ್ರರಾಗಿ ಅಲ್ಲಿ ಮಡಿವಾಳಪ್ಪನಿಗೆ ಗುರುಗಳು ಸಿದ್ಧಕುಮಾರ ಎಂದು ನಾಮಕರಣ ಮಾಡಿದ ಬಳಿಕ ಸಿದ್ಧಕುಮಾರ ತಿರುಚಿ ಶ್ರೀಗಳನ್ನು ಭೇಟಿಯಾಗಿ ಪರಿಚಯಿಸಿಕೊಂಡ ನಂತರ ಈ ಬಾಲಕನ ವಿದ್ಯಾಭ್ಯಾಸದ ಹಸಿವನ್ನು ಮೆಚ್ಚಿ ಸಂಸ್ಕøತ ಕಲಿಯಲು ಬೆಂಗಳೂರಿನ ತಮ್ಮ ಆಶ್ರಮಕ್ಕೆ ಬರಲು ಹೇಳಿದರು. ಅಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮೈಸೂರಿನ ಜಯಚಾಮರಾಜೇಂದ್ರ ಸಂಸ್ಕøತ ಕಾಲೇಜಿನಲ್ಲಿ ಸಂಸ್ಕøತ ಅಭ್ಯಸಿಸಿ 1970 ರಲ್ಲಿ ಸಂಸ್ಕøತ ವಿದ್ವಾನ್ ಪದವಿ ಪ್ರಥಮ ಶ್ರೇಣಿಯಲ್ಲಿ ಪಡೆದರು. ಜೋತೆಗೆ ಕನ್ನಡ, ಇಂಗ್ಲೀಷ ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ಇದೇ ವೇಳೆ ಅವರು ಸಾಹಿತ್ಯ ವಿಶಾರದ ಪದವಿ ಗಳಿಸಿಕೊಂಡರು. ಆಗಿನ ಆಸ್ಥಾನ ವಿದ್ವಾಂನ ಕೆ.ಪಿ. ಶಂಕರ ಶಾಸ್ತ್ರಿಗಳ ದಕ್ಷ ಪಂಡಿತರು ಇವರ ವಿದ್ಯಾ ಗುರುಗಳಾಗಿದ್ದರು.
ಇಂಚಲ ಮಠದ ಪೀಠಾಧೀಶ: ಅಷ್ಟರಲ್ಲಿಯೇ ಆಗ ತಪೋನಿಧಿ ಇಂಚಲದ ಶ್ರೀಮಠದ ಪೀಠಾಧೀಶ ಸಿದ್ಧರಾಮ ಶಿವಯೋಗಿ ಹುಬ್ಬಳ್ಳಿ ಸಿದ್ಧಾರೂಢರ ಮಠಕ್ಕೆ ಆಗಾಗ ಬರುತ್ತಿದ್ದರು. ಎಲ್ಲರ ಅಚ್ಚುಮೆಚ್ಚಿನವರಾದ ಸಿದ್ಧಕುಮಾರ ಶೀವಯೋಗಿಗಳ ಯೋಗ ದೃಷ್ಠಿಗೆ ಬಿದ್ದರು. ಮಠದ ನಾಲ್ಕನೇಯ ಪೀಠಾಧೀಶನನ್ನಾಗಿ ಮಾಡಲು ನಿರ್ಧರಿಸಿ, 1969ರ ಶಿವರಾತ್ರಿ ದಿನ ಸಿದ್ಧಕುಮಾರನಿಗೆ ಶ್ರೀ ಶಿವಾನಂದ ಭಾರತಿ ಎಂದು ನಾಮಕರಣದೊಂದಿಗೆ ಪಟ್ಟಾಭಿಷೇಕ ಮಾಡಿದರು. 1972 ರಲ್ಲಿ ಇಂಚಲದಲ್ಲಿ ನಡೆದ ವೇದಾಂತ ಪರಿಷತ್ತ್ ಕಾರ್ಯಕ್ರಮಕ್ಕೆ ಹರಿದ್ವಾರದಿಂದ ಆಗಮಿಸಿದ ಮಹಾಮಂಡಲೇಶ್ವರ ಮಹಾಸ್ವಾಮಿಜಿ ಅವರು ವಿಶ್ವಕುಟುಂಬಿ ನಿರಾಭಾರಿ ಸದ್ಗುರು ಎಂಬ ಬಿರುದು ದಯಪಾಲಿಸಿದ್ದಾರೆ. ಅದಿನಿಂದ ಭಾರತಿ ಶ್ರೀಗಳು ಶ್ರೀಕ್ಷೇತ್ರ ಇಂಚಲದ ಸರ್ವತೋಮುಖ ಏಳಿಗೆಗೆ ಶ್ರಮಿಸಲು ತಮ್ಮನ್ನು ತಾವೇ ಅರ್ಪಿಸಿಕೊಂಡರು. ಪೂಜ್ಯರ ಜೀವನ ಅನೇಕ ಅದ್ಭುತಗಳಿಂದ ಕೂಡಿದ ಲೀಲಾಮಯವಾಗಿ ಇಂದು ಲೋಕ ಕಲ್ಯಾಣಕ್ಕಾಗಿ ಅಕ್ಷಯ ನಿಧಿಯಾಯಿತು.
ಶೈಕ್ಷಣಿಕ ಹರಿಕಾರದ ಸಂತ: ಇಂಚಲ ಮಠದಲ್ಲಿ ಪ್ರಾಥಮಿಕ ಹಂತದ ಹಿಡಿದು ಮಹಾವಿದ್ಯಾಲಯ, ಟಿಸಿಎಚ್ ತರಬೇತಿ ವಿದ್ಯಾಲಯ, ಆಯುರ್ವೇದ ಮಹಾವಿದ್ಯಾಲಯಗಳು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಂಸ್ಕøತ ಪಾಠ ಶಾಲೆ, ಶಾರದಾ ಸಂಗಿತ ಶಾಲೆ ತೆರೆದು ಅಲ್ಲಿ ಬಡಮಕ್ಕಳಿಗೆ ಶಿಕ್ಷಣ, ಪ್ರಸಾದ, ಬಟ್ಟೆ, ಬರೆ ವಸತಿ ಉಚಿತವಾಗಿ ನೀಡುತ್ತಿದ್ದಾರೆ. ಭಾರತಿ ಶ್ರೀಗಳು ಧಾರ್ಮಿಕ ಕ್ಷೇತ್ರದಲ್ಲಿ ಅಲ್ಲದೇ ಸಾಮಾಜಿಕ, ಶೈಕ್ಷಣಿಕ, ಕೃಷಿ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೋಂದಿದ ಶ್ರೀಗಳು ತಮ್ಮ ಶ್ರೀ ಮಠದ ಜಮೀನಿನಲ್ಲಿ ವಿಭಿನ್ನ ಬೆಳೆ ಬೆಳೆದು ಕೃಷಿಕಾರರಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ವಿಶ್ವಶಾಂತಿಗಾಗಿ ವೇದಾಂತ ಪರಿಷತ್ತ್: ಭಾರತಿ ಶ್ರೀಗಳು ಭಕ್ತ ಕುಲಕೋಟಿಯ ಆರೂಢ ಪರಂಪರೆಯ ಪ್ರಸಿದ್ಧ ಮಠಗಳಲ್ಲಿ ಆಧ್ಯಾತ್ಮ, ಅನ್ನ ದಾಸೋಹಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಈ ನಾಡಿನ ಅತಿ ಶ್ರೇಷ್ಠವಾದ ಧಾರ್ಮಿಕ ತಿರುಳು ಅದ್ವೈತ್‍ದ ಸಾರವನ್ನು ಜನಸಾಮಾನ್ಯರಿಗೆ ತಿಳಿಸಲು ಶ್ರೀ ಮಠದಲ್ಲಿ ಅಖಿಲ ಭಾರತ ವೇದಾಂತ ಪರಿಷತ್ತುನ್ನು ನಡೆಸುವ ಮೂಲಕ ಕೈಕೊಂಡಿದ್ದಾರೆ. ನಿಜಗುಣರ ಕೈವಲ್ಯ ಪದ್ಧತಿ ಭಾರತಿ ಶ್ರೀಗಳ ಮೆಚ್ಚಿನ ಶಾಸ್ತ್ರವಾಗಿದೆ. ಶ್ರೀಗಳು ಮಾನವ ಕುಲಕೋಟಿಗೆ ಅದ್ವೈತ್ ತತ್ವವನ್ನು ನಾಡಿನಷ್ಟೇ ಅಲ್ಲದೇ ವಿದೇಶಿದಲ್ಲಿಯೂ ಸಹ ಪ್ರವಾಸ ಕೈಕೊಂಡು ತಮ್ಮ ಅಮೃತವಾಣಿಯನ್ನು ಉಪದೇಶಿಸಿದ್ದಾರೆ.
ವಿಶ್ವ ಶಾಂತಿಗಾಗಿ ಅಖಿಲ ಭಾರತ ವೇದಾಂತ್ ಪರಿಷತ್ತ್‍ನ್ನು ಪ್ರತಿವರ್ಷ ನಡೆಯಿಸಿಕೊಂಡು ಬರುತ್ತಿದ್ದಾರೆ. ನಾಡಿನ ಪ್ರತಿ ಹಳ್ಳಿಗಳಲ್ಲಿ ಸತ್ಸಂಗ ಸಮ್ಮೇಳನ ಕೈಗೊಳ್ಳುವ ಮೂಲಕ ಜಾತಿ, ಮತ, ಪಂಥ, ದೇಶ, ನಾಡು ಈ ಎಲ್ಲ ಭಾವನೆಗಳನ್ನು ತೊರೆದು ನಾವೆಲ್ಲರೂ ಒಂದೇ, ಸತ್ಯ, ಶಾಂತಿ, ನೀತಿಯಿಂದ ಬಾಳಿರಿ ಎಂದು ಸಾರಿದ ಕೀರ್ತಿ ಸಾಧು ಚಕ್ರವರ್ತಿ ಶಿವಾನಂದ ಭಾರತಿ ಶ್ರೀಗಳಿಗೆ ಸಲ್ಲುತ್ತದೆ.

Related posts: