RNI NO. KARKAN/2006/27779|Friday, March 20, 2026
You are here: Home » breaking news » ಗೋಕಾಕ:ಅತಿ ಕಡಿಮೆ ವಯಸ್ಸಿನಲ್ಲಿ ಸಂಸತ್ತಿನ ಆಯ್ಕೆಯಾಗಿದ್ದಕ್ಕೆ ಬಹಳ ಖುಷಿಯಾಗಿದೆ : ನೂತನ ಸಂಸದೆ ಪ್ರಿಯಾಂಕಾ ಅಭಿಮತ

ಗೋಕಾಕ:ಅತಿ ಕಡಿಮೆ ವಯಸ್ಸಿನಲ್ಲಿ ಸಂಸತ್ತಿನ ಆಯ್ಕೆಯಾಗಿದ್ದಕ್ಕೆ ಬಹಳ ಖುಷಿಯಾಗಿದೆ : ನೂತನ ಸಂಸದೆ ಪ್ರಿಯಾಂಕಾ ಅಭಿಮತ 

ಅತಿ ಕಡಿಮೆ ವಯಸ್ಸಿನಲ್ಲಿ ಸಂಸತ್ತಿನ ಆಯ್ಕೆಯಾಗಿದ್ದಕ್ಕೆ ಬಹಳ ಖುಷಿಯಾಗಿದೆ : ನೂತನ ಸಂಸದೆ ಪ್ರಿಯಾಂಕಾ ಅಭಿಮತ

ಗೋಕಾಕ ಜೂ 5 : ಅತಿ ಕಡಿಮೆ ವಯಸ್ಸಿನಲ್ಲಿ ಸಂಸತ್ತಿನ ಆಯ್ಕೆಯಾಗಿದ್ದಕ್ಕೆ ಬಹಳ ಖುಷಿಯಾಗುತ್ತಿದ್ಜು, ಈ ಆಯ್ಕೆಗೆ ಕಾರಣರಾದ ಮತದಾರರಿಗೆ, ಸಹಕರಿಸಿದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದೇನೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ನೂತನ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ಹಿಲ್ ಗಾರ್ಡನ್ ಗೃಹ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ 8 ವಿಧಾನಸಭಾ ಮತಕ್ಷೇತ್ರಗಳ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವುದು ತುಂಬಾ ಸವಾಲಿನ ಕಾರ್ಯವಾಗಿತ್ತು, ಆದರೆ ತಂದೆಯ ಮಾರ್ಗದರ್ಶನ ,ತಮ್ಮನ ಸಹಕಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ, ಅಭಿಮಾನಿಗಳ ಹಗಲಿರುಳು ಪರಿಶ್ರಮದಿಂದ ಇದು ಸಾಧ್ಯವಾಗಿತ್ತು. ಕಾಂಗ್ರೆಸ್ ಪಕ್ಷದ ಶಾಸಕರ ಸಹಕಾರದಿಂದ ನನ್ನ ಗೆಲುವು ಸುಲಭವಾಗಿದೆ.
ಬಿಜೆಪಿ ಪಕ್ಷದ ಶಾಸಕರ ಕ್ಷೇತ್ರ ನಿಪ್ಪಾಣಿಯಲ್ಲಿ ದೊಡ್ಡ ಮಟ್ಟದ ಅಂತರ ದೊರೆತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಈ ಅಂತರ ಐತಿಹಾಸಿಕ ಅಂತರವಾಗಿದೆ. ಈಗಾಗಲೇ ಕ್ಷೇತ್ರದಲ್ಲಿಯ ಸಮಸ್ಯೆಗಳ ಬಗ್ಗೆ ಜನರು ಮನವಿ ಪತ್ರಗಳನ್ನು ನೀಡಿದ್ದಾರೆ. ತಂದೆ ಅವರೊಂದಿಗೆ ಚರ್ಚಿಸಿ ಎಲ್ಲಾ ಸಮಸ್ಯೆಗಳಲ್ಲಿಗೆ ಸ್ವಂದಿಸುವ ಕಾರ್ಯ ಯೋಜನೆಯನ್ನು ಸಿದ್ದ ಪಡಿಸಲಾಗುವುದು ಎಂದು ಹೇಳಿದ ಪ್ರಿಯಾಂಕಾ ಜಾರಕಿಹೊಳಿ ಅವರು ತಂದೆ ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಚಿಕ್ಕೋಡಿಯಲ್ಲಿ ವರ್ಕೌಟ್ ಆಗಿವೆ. ರಾಹುಲ್ ಗಾಂದಿ ಅವರಂತಹ ಮಹಾನ ನಾಯಕರು ಸಂಸತ್ತಿನಲ್ಲಿ ಇರುವುದರಿಂದ ನಾನು ತುಂಬಾ ಕಾತುರದಿಂದ ಸಂಸತ್ ಪ್ರವೇಶಕ್ಕಾಗಿ ಕಾಯುತ್ತಿದ್ದೇನೆ ಪಕ್ಷದ ವರಿಷ್ಠರಿಂದ ಕರೆ ಬಂದಾಗ ದೆಹಲಿಗೆ ಹೋಗುವುದಾಗಿ ಹೇಳಿದ ಅವರು ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

Related posts: