ಗೋಕಾಕ:ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಅಂಬಿರಾವ ಪಾಟೀಲ ಅವರಿಂದ ಭೂಮಿ ಪೂಜೆ
ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಅಂಬಿರಾವ ಅವರಿಂದ ಪಾಟೀಲ ಭೂಮಿ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 22 :
ಗ್ರಾಮಗಳಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕಾಗಿಯೇ ಘಟಕವನ್ನು ನಿರ್ಮಿಸಲಾಗುತ್ತಿದೆ‘ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.ಸಮೀಪದ ಮರಡಿ ಶಿವಾಪೂರ ಗ್ರಾಮದಲ್ಲಿ ಶನಿವಾರದಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹಮ್ಮಿಕೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘1 ಎಕರೆ ಪ್ರದೇಶದಲ್ಲಿ ಅಂದಾಜು ₹25 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುವುದು, ವಿಲೇವಾರಿ ಘಟಕದ ಆವರಣಗೊಡೆ, ಗೇಟ್ ಅಳವಡಿಕೆ, ಕಸ ಸಾಗಣೆ ವಾಹನಗಳು ಹಾಗೂ ಇತರೆ ಅಗತ್ಯ ಉಪಕರಣಗಳ ಜೊತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಗ್ರಾಮದ ಸ್ವಚ್ಚತೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಪ್ರತಿಯೊಬ್ಬರೂ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೇ ತ್ಯಾಜ್ಯ ವಿಲೇವಾರಿ ವಾಹನ ತಮ್ಮ ಮನೆಮನೆಗೆ ಬರುತ್ತದೆ ಅದರಲ್ಲಿ ನಿಮ್ಮ ಮನೆಯ ಕಸ ಹಾಕಬೇಕು. ಪರಿಹರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಘಟಕ ತುಂಬಾ ಉಪಯುಕ್ತಕಾರಿಯಾಗಿದ್ದು, ತ್ಯಾಜ್ಯ ವಸ್ತುಗಳಿಂದ ಕಾಂಪೋಸ್ಟ್ ಸಾವಯುವ ಗೊಬ್ಬರ ತಯಾರಾಗುತ್ತದೆ ಇದು
ರೈತರಿಗೆ ತುಂಬಾ ಲಾಭದಾಯಕವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಖಡಕಬಾಂವಿ, ಶಿವಪ್ಪ ದಳವಾಯಿ, ಭರಮನ್ನ ಐದುಡ್ಡಿ, ಚೂನಪ್ಪ ಹೂಳಿ, ಕಾಳಪ್ಪ ಕೊಳವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.