ಗೋಕಾಕ:ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು : ಬೆಲೆ ಬಾಳುವ ವಿವಿಧ ಕಂಪನಿಯ ಮೊಬೈಲಗಳು ಕಳವು

ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು : ಬೆಲೆ ಬಾಳುವ ವಿವಿಧ ಕಂಪನಿಯ ಮೊಬೈಲಗಳು ಕಳವು
ಗೋಕಾಕ ಮೇ 25 : ನಗರದ ಹೊಸಪೇಟೆ ಓಣಿಯಲ್ಲಿರುವ ಓಂ ಎಂಟರ್ ಪ್ರೈಜಸ್ ಅಂಗಡಿಯ ಶೆಟ್ಟರ್ ಮುರಿದು ಕಳ್ಳತನ ಮಾಡಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ
ಇದೇ ಓಣಿಯಲ್ಲಿರುವ ಮತ್ತೊಂದು ಕೆ.ಕೆ.ಎಂಟರ ಪೈಜಸ್ ಮೊಬೈಲ್ ಅಂಗಡಿ ಕಳವು ಮಾಡುವ ಯತ್ನ ವಿಫಲವಾಗಿದ್ಧು, ಕಳ್ಳರು ಕಳತನ ಮಾಡಿದ್ದ ಮೊಬೈಲ್ ಕವರಗಳನ್ನು ನಗರದ ಅಂಒಎ ಕಛೇರಿಯ ಹಿಂಬದಿ ಬಿಸಾಡಿದ್ದಾರೆ ಎಂದು ತಿಳಿದು ಬಂದಿದೆ. ಕಳುವಾದ ಅಂಗಡಿಯಿಂದ ಸ್ಯಾಮಸಂಗ್ -16, ರೆಡಮಿ -17, ವಿವೋ 15, ಒಪೋ ಕಂಪನಿಯ ಒಟ್ಟು 60 ಅಂದಾಜು ಕಿಮ್ಮತ್ತು 9.95 ಲಕ್ಷ ರೂಗಳ ಮೊಬೈಲ್ ಕಳ್ಳತನವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಪಂಕಜ್ ಬಾರದಲ್ಲಿಯೂ ಸಹ ಶೆಟ್ಟರ್ ಮುರಿದು ಕಳ್ಳತನ ಮಾಡಿರುವ ಕಳ್ಳರು . ಪರಾರಿಯಾಗಿದ್ದಾರೆ.
ಬೆಳಗೆ ಜಾವ ನಡೆದಾರುವ ಕಳ್ಳತನ ಘಟನೆಯು ಗೋಕಾಕ ನಾಗರಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಬಿ.ಬಸರಗಿ, ಡಿ.ವಾಯ್.ಎಸ್.ಪಿ. ಡಿ.ಎಚ್.ಮುಲ್ಲಾ, ಸಿಪಿಐ ಆರ್.ಎಸ್.ಜಾನಾರ, ಪಿಎಸ್ಐ ಕೆ.ಬಿ.ವಾಲಿಕರ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕಿತ ಕಳ್ಳರು 3 ರಿಂದ 4 ಜನ ಇರಬಹುದು ಎಂದು ಶಂಕಿಸಲಾಗಿದೆ . ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.