RNI NO. KARKAN/2006/27779|Saturday, May 4, 2024
You are here: Home » breaking news » ಗೋಕಾಕ:ಉತ್ತರ ಕರ್ನಾಟಕ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಫಲವತ್ತಾದ ನೆಲವಾಗಿದೆ : ಲಿಲಿತ ಪ್ರಬಂಧಕಾರ ಈರಪ್ಪ ಕಂಬಳಿ

ಗೋಕಾಕ:ಉತ್ತರ ಕರ್ನಾಟಕ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಫಲವತ್ತಾದ ನೆಲವಾಗಿದೆ : ಲಿಲಿತ ಪ್ರಬಂಧಕಾರ ಈರಪ್ಪ ಕಂಬಳಿ 

ಉತ್ತರ ಕರ್ನಾಟಕ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಫಲವತ್ತಾದ ನೆಲವಾಗಿದೆ : ಲಿಲಿತ ಪ್ರಬಂಧಕಾರ ಈರಪ್ಪ ಕಂಬಳಿ

ಗೋಕಾಕ ಎ 22 : ಉತ್ತರ ಕರ್ನಾಟಕ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಫಲವತ್ತಾದ ನೆಲವಾಗಿದೆ ಎಂದು ಬೆಂಗಳೂರಿನ ಲಿಲಿತ ಪ್ರಬಂಧಕಾರ ಈರಪ್ಪ ಕಂಬಳಿ ಹೇಳಿದರು.

ರವಿವಾರದಂದು ನಗರದ ಅಮ್ಮಾಜೀ ನೃತ್ಯ ಶಾಲೆಯಲ್ಲಿ ಇಲ್ಲಿನ ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅವರ ದಿಲ್ಲಿ ಲೋಕಾಭಿರಾಮ, ಪರಿಣಯ ಪರಸಂಗ, ಅವುಜೀಕರ ಮಹಾರಾಜ, ಯದ್ಭಾವಂ ತದ್ಭವತಿ ಎಂಬ ನಾಲ್ಕು ಗ್ರಂಥಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಾಹಿತಿಗಳು ನೀಡಿದ ಮೌಲ್ಯಾಧಾರಿತ ಗ್ರಂಥಗಳನ್ನು ಇಂದಿನ ಯುವಪೀಳಿಗೆ ಓದುವ ಮೂಲಕ ಸುಸಂಸ್ಕೃತರಾಗಿ ಸಂಸ್ಕೃತಿಯನ್ನು ಉಳಿಸಿ, ಬೆಳಸಬೇಕು. ಗೋಕಾಕ ತಾಲೂಕು ಹಲವಾರು ಮಹಾನ ಸಾಹಿತಿಗಳನ್ನು ನಾಡಿಗೆ ನೀಡಿದೆ.150 ಗ್ರಂಥಗಳನ್ನು ರಚಿಸುವ ಮೂಲಕ ಅಂತಹ ಸಾಲಿಗೆ ಮಹಾಲಿಂಗ ಮಂಗಿ ಅವರು ಸೇರಿದ್ದಾರೆ. ಇನ್ನು ಹೆಚ್ಚಿನ ಸಾಹಿತ್ಯ ಸೇವೆ ಅವರಿಂದ ದೊರೆಯಲೆಂದು ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹುಕ್ಕೇರಿ ಶ್ರೀ ಮಂಜುನಾಥ್ ಮಹಾರಾಜರು ವಹಿಸಿದ್ದರು. ಗ್ರಂಥಗಳನ್ನು ಮಕ್ಕಳ ಸಾಹಿತಿ ಡಾ.ಎಲ್.ಎಸ್‌.ಚೌರಿ ಲೋಕಾರ್ಪಣೆ ಮಾಡಿದರು.
ಗ್ರಂಥಗಳ ಕುರಿತು ಡಾ.ಅನಿತಾ ಕರಾಜನಗಿ, ಡಾ.ಸಾವಿತ್ರಿ ಕಮಲಾಪೂರ, ಪ್ರಾಚಾರ್ಯ ಜಯಾನಂದ ಮಾದರ, ಈಶ್ವರ ಮಮದಾಪುರ ಮಾತನಾಡಿದರು.
ವೇದಿಕೆಯಲ್ಲಿ ಡಾ.ಉದ್ದಣ್ಣ ಗುಡೇರ, ವಿದ್ಯಾ ರೆಡ್ಡಿ, ರಜನಿ ಜಿರಗ್ಯಾಳ, ಸೌಭಾಗ್ಯ ಕೊಪ್ಪ, ಚಂದ್ರಶೇಖರ್ ಅಕ್ಕಿ ,ಮಹಾಂತೇಶ ತಾವಂಶಿ , ರಾಜೇಶ್ವರಿ ಒಡೆಯರ್ , ಈಶ್ವರಚಂದ್ರ ಬೇಟಗೇರಿ, ಬಸವರಾಜ ಮುರಗೋಡ, ಡಾ.ಅಶೋಕ ಜಿರಗ್ಯಾಳ, ರಾಮಜಿ ಜಂಗನ್ನವರ ಉಪಸ್ಥಿತರಿದ್ದರು.

Related posts: