RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ

ಗೋಕಾಕ:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ 

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ

ಗೋಕಾಕ ಎ 22 : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಬಸವೇಶ್ವರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ದಿನಾಂಕ 18 ರಂದು ಹುಬ್ಬಳ್ಳಿಯ ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿನಿ ನೇಹಾ ಹಿರೇಮಠ ಎನ್ನುವ ಹಿಂದೂ ಯುವತಿಯನ್ನು ಫಯಾಜ್ ಎನ್ನುವ ಮುಸ್ಲಿಂ ಯುವಕ ಚಾಕುವಿನಿಂದ ಇರಿದು ಅಮಾಸುಶ್ಯವಾಗಿ ಕೊಲೆ ಮಾಡಿದ್ದಾನೆ . ರಾಜ್ಯದ ಜನತೆ ಬೆಚ್ಚಿ ಬಿಳಿಸುವಂತಾ ಘಟನೆ ಇದ್ದಾಗಿದ್ದು, ನೇಹಾ ಕೋಲೆಗಾರನ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಈ ಕುರಿತು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಡಾ.ಸಂಜಯ ಹೋಸಮಠ, ನಾರಾಯಣ ಮಠಾಧೀಕಾರಿ, ಆನಂದ ಪಾಟೀಲ, ಸದಾಶಿವ ಗುದಗಗೋಳ,ಡಾ.ಮಹಾಂತೇಶ ಕಡಾಡಿ, ಅನುಪಾ ಕೌಶಿಕ, ರಜನಿ ಜಿರಗ್ಯಾಳ, ಎಂ.ಡಿ.ಚುನಮರಿ, ಚಂದ್ರಶೇಖರ್ ಕೊಣ್ಣೂರ, ಪ್ರಮೋದ್ ಜೋಶಿ, ಎಸ್.ವ್ಹಿ ದೇಣಶೆಟ್ಟಿ, ಸಿದ್ದಲಿಂಗ ದಳವಾಯಿ, ಬಸವರಾಜ ಫಡತಾರೆ, ಪ್ರಕಾಶ ರಾಠೋಡ, ನರೇಂದ್ರ ಪರಮಾರ, ರಮೇಶ ಉಟಗಿ, ಮಹಾಂತೇಶ ತಾವಂಶಿ, ಸೋಮಶೇಖರ್ ಮಗದುಮ್ಮ, ಸಿ.ಜಿ.ಕೌಜಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: