ಗೋಕಾಕ:ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ

ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ
ಗೋಕಾಕ ಏ 8 : : ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆದರೆ ನಮಗೆ ಯಶಸ್ಸಿನೊಂದಿಗೆ ನೆಮ್ಮದಿಯ ಬದುಕು ದೊರೆಯುವದೆಂದು ಊಟಿಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ ಹೇಳಿದರು.
ರವಿವಾರದಂದು ನಗರದ ಮಯೂರ ಶಾಲೆಯ ಸಭಾ ಭವನದಲ್ಲಿ ಶ್ರೀರಾಮಕೃಷ್ಣ ಸತ್ಸಂಗ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಶಕ್ತಿಯೂ ನಮ್ಮಲ್ಲಿದ್ದು ನಮ್ಮ ಮನಸ್ಸನ್ನು ಬಡಿದೆಬ್ಬಿಸಿದರೇ ಆ ಶಕ್ತಿ ಹೊರಬರುವದೆಂದು ವಿವೇಕಾನಂದರು ಹೇಳಿದ್ದರು. ಜಗತ್ತು ಹಾಗೂ ಭಗವಂತ ಒಂದೆ, ಭಗವಂತನನ್ನು ಸಾಕ್ಷಾತ್ಕರಿಸಲು ಜಗತ್ತನ್ನೇ ಮಾರ್ಗವಾಗಿ ಉಪಯೋಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ನವದುರ್ಗಾನಂದಜಿ ಮಹಾರಾಜ, ಶ್ರೀ ಸ್ವಾಮಿ ಮೋಕ್ಷಾತ್ಮಾನಂದಜಿ ಮಹಾರಾಜ, ಸತ್ಸಂಗ ಕೇಂದ್ರ ಮಲ್ಲಿಕಾರ್ಜುನ ಈಟಿ, ವಿನಾಯಕ ಚಿಪ್ಪಲಕಟ್ಟಿ, ರಂಗಣ್ಣ ಚಿಪ್ಪಲಕಟ್ಟಿ ಇದ್ದರು.