RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ್ತಿದ್ದಾರೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ

ಗೋಕಾಕ:ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ್ತಿದ್ದಾರೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ 

ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ್ತಿದ್ದಾರೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ
ಗೋಕಾಕ ಮಾ 1 : ಭಾರತದ ಹಲವಾರು ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ್ತಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದರು.
ಶುಕ್ರವಾರದಂದು 19ನೇ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಲು ನಗರಕ್ಕೆ ಬಂದಿದ್ದ ಸಮಯದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿಸಿಇ ವಿದ್ಯಾರ್ಥಿಗಳ ಜೊತೆಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿ ಅವರು ಮಾತನಾಡಿದರು

ವಿದೇಶದಲ್ಲಿ ಕಾರ್ಯಮಾಡುತ್ತಿರುವ ಹಲವಾರು ವಿಜ್ಞಾನಿಗಳು ಇಸ್ರೋದ ಕಾರ್ಯವನ್ನು ಮೆಚ್ಚಿ ಭಾರತಕ್ಕೆ ಮರಳುತ್ತಿದ್ದಾರೆ.
ಬರೀ ಸರಕಾರದ ಅಧಿನದಲ್ಲಿರು ಇಸ್ರೋವನ್ನು ಹೋರತುಪಡೆಸಿ ಖಾಸಗಿಯಾಗಿಯು ಸಹ ಹಲವಾರು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೊವಿಡ ಸಮಯದಲ್ಲಿ ಖಾಸಗಿ ವಿಜ್ಞಾನಿಗಳು ಕಂಡುಹಿಡಿದ ಲಸಿಕೆಯನ್ನು ಇಡೀ ಜಗತ್ತು ಒಪ್ಪಿಕೊಂಡು ರಪ್ತು ಮಾಡಿಕೊಂಡಿದ್ದವು ಎಂದು ಸ್ಮರಿಸಿದ ಅವರು ಮ್ಯಾಕಾನಿಕಲ್ ಇಂಜಿನಿಯರಿಂಗ್, ಕ್ಯಾಮೆಸ್ಟ್ರಿ , ಕಂಪ್ಯೂಟರ್ ಪ್ರೋಗ್ರಾಮ್, ಡಿಮಲೋಮಾ, ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಲ್ಲಿ ಇಸ್ರೋದಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳನ್ನು ಇಸ್ರೋ ನೀಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಇಸ್ರೋದ ಭಾಗವಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠದ ಉಪಸ್ಥಿತರಿದ್ದರು.

Related posts: