ಗೋಕಾಕ:ಸತೀಶ್ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಸತೀಶ್ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಗೋಕಾಕ ಜ 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ 20 ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮದ ಅಂತಿಮ ದಿನದ ಕಾಲೇಜು ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಎಸ್.ಎಸ್.ಎ ಪಿಯು ಕಾಲೇಜಿನ ಸುದರ್ಶನ್ ರೆಬ್ಬನ್ನವರ ಪ್ರಥಮ, ಜ್ಞಾನ ದೀಪ ಕಾಲೇಜಿನ ಶಿವರಾಯಿ ಕಳಶ್ಯಾಳಗೋಳ ದ್ವಿತೀಯ, ಮೂಡಲಗಿಯ ಎಂ.ಇ.ಎಸ್.ಡಿಗ್ರಿ ಕಾಲೇಜಿನ ಐಶ್ವರ್ಯ ತಳವಾರ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮಸ್ಥಾನ ಪಡೆದ ವಿದ್ಯಾರ್ಥಿಗೆ 10 ಸಾವಿರ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ರೂಗಳ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದ ಗಾಯನ ಸ್ವರ್ಧೆಯಲ್ಲಿ ಕಲ್ಲೋಳಿಯ ಎಸ್.ಆರ್.ಇ ಶಾಲೆಯ ಸುಪ್ರೀಯಾ ಮಠಪತಿ ಪ್ರಥಮ, ಖನಗಾವದ ಆರ್.ಎಂ.ಎಸ್.ಎ ಶಾಲೆಯ ಪೂಜಾ ಮಿಲ್ಕೆ ದ್ವಿತೀಯ, ಗೋಕಾಕನ ಫಾಲ್ಸ್ ನ ಪೋಬ್ಸ ಅಕ್ಯಾಡಮಿ ಸ್ಕೂಲ್ ನ ಸುನೀಧಿ ಮುತಾಲಿಕದೇಸಾಯಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 15 ಸಾವಿರ, ದ್ವಿತೀಯ 13 ಸಾವಿರ, ತೃತೀಯ 10 ಸಾವಿರ ರೂಗಳ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ವಿಭಾಗದ ಸಮೂಹ ನೃತ್ಯ ಸ್ವರ್ಧೆಯಲ್ಲಿ ಗೋಕಾಕನ ಚನ್ನಬಸವೇಶ್ವರ ವಿದ್ಯಾಪೀಠ ಶಾಲಾ ತಂಡ ಪ್ರಥಮ, ನಾಗನೂರಿನ ಎಂ.ಡಿ.ಆರ್.ಎಸ್.ತಂಡ ದ್ವಿತೀಯ, ದೂಪದಾಳನ ಶ್ರೀ ಮಹಾವೀರ ಖೇಮಲಾಪೂರೆ ಶಾಲಾ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರೌಡಶಾಲಾ ವಿಭಾಗದ ಸಮೂಹ ನೃತ್ಯ ಸ್ವರ್ಧೆಯಲ್ಲಿ ಕಲ್ಲೋಳಿಯ ಪಿ.ಜೆ.ಎನ್.ಶಾಲೆಯ ಶಾಲಾ ತಂಡ ಪ್ರಥಮ, ಕಲ್ಲೋಳಿಯ ಮೂರಾರ್ಜಿ ಶಾಲಾ ತಂಡ ದ್ವಿತೀಯ , ಗೋಕಾಕನ ಶೇಪರ್ಡ ಮಿಶನ್ ಆಂಗ್ಲ ಮಾಧ್ಯಮ ಶಾಲಾ ತಂಡ ತೃತೀಯ ಸ್ಥಾನ ಪಡೆದಿದ್ದೆ.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಸಾವಿರ, ದ್ವಿತೀಯ 30 ಸಾವಿರ ಹಾಗೂ ತೃತೀಯ 20 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗಣ್ಯರು ಗೌರವಿಸದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು. ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 15 ಸಾವಿರ ರೂ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ ಶುರ್ಗಸ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಯುವ ಮುಖಂಡರುಗಳಾದ ರಾಹುಲ್ ಜಾರಕಿಹೊಳಿ, ಸನತ್ ಜಾರಕಿಹೊಳಿ, ಆರ್ಯನ್ ಜಾರಕಿಹೊಳಿ, ವಿರೇಶ ದೊಡಮನಿ, ರಾಮಚಂದ್ರ ದಿಕ್ಷಿತ್ , ಬಸವರಾಜ ಸಾಯನ್ನವರ, ಬಾಲಚಂದ್ರ ಶಿಗ್ಯಾಗೋಳ, ಡಿಎಚ್ಓ ಡಾ.ಮಹೇಶ್ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಬಸವರಾಜ ಕುರಿಹೂಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.