RNI NO. KARKAN/2006/27779|Tuesday, March 17, 2026
You are here: Home » breaking news » ಗೋಕಾಕ:ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ

ಗೋಕಾಕ:ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ 

ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ
ಗೋಕಾಕ ಡಿ 31 : ಸ್ಥಳೀಯ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕಬ್ಲ್ ತಾಲೂಕಿನ ಸರಕಾರಿ ನೌಕರರಿಗಾಗಿ ಆಯೋಜಿಸಿದ್ದ ಎ.ಆರ್‌.ಜೆ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪೊಲೀಸ್ ಕ್ರಿಕೆಟ್‌ ತಂಡ ಮೊದಲ ಸ್ಥಾನ ಪಡೆಯಿತು.

ರವಿವಾರದಂದು ನಡೆದ ಅಂತಿಮ ಪಂದ್ಯದಲ್ಲಿ ಪೊಲೀಸ್ ಇಲಾಖೆ ತಂಡ ಹಾಗೂ ಅರಣ್ಯ ಇಲಾಖೆ ತಂಡಗಳು ಪರಸ್ಪರ ಸೆಣಸಿದವು. ಟಾಸ್‌ ಗೆದ್ದ ಅರಣ್ಯ ಇಲಾಖೆ ತಂಡ ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡು ಆಟ ಆರಂಭಿಸಿತು. ಮೊದಲು ಬ್ಯಾಟ ಮಾಡಿದ ಪೊಲೀಸ್ ಇಲಾಖೆ ತಂಡ ನಿಗದಿತ 10 ಓವರಗಳಲ್ಲಿ 5 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು.
ನಂತರ ಬ್ಯಾಟಿಂಗ್‌ ಆರಂಭಿಸಿದ ಅರಣ್ಯ ಇಲಾಖೆ ತಂಡ
10 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು, ಕೇವಲ 61 ರನ್‌ ಗಳಿಸಿ ಪೊಲೀಸ್ ಇಲಾಖೆ ವಿರುದ್ಧ ಸೋಲನುಭವಿಸಿತು.
ಪ್ರಥಮ ಸ್ಥಾನ ಪಡೆದ ಪೊಲೀಸ್ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಆಕರ್ಷಕ ಟ್ರೋಫಿ ವಿತರಿಸಿದರು ಮತ್ತು ದ್ವಿತೀಯ ಸ್ಥಾನ ಪಡೆದ ಅರಣ್ಯ ಇಲಾಖೆಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರು ಆಕರ್ಷಕ ಟ್ರೋಪಿಯನ್ನು ವಿತರಿಸಿದರು.
ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಅರಣ್ಯ ಇಲಾಖೆ ತಂಡದ ಮಲ್ಲು ಕೆ , ಉತ್ತಮ ಬೌಲರ್‌ ಎಂದು ಪೊಲೀಸ್ ಇಲಾಖೆಯ ಲಕ್ಷ್ಮಣ ಬಿಳ್ಳೂರ, ಉತ್ತಮ ಬ್ಯಾಟ್ಸಮನ್ ಆಗಿ ಅರಣ್ಯ ಇಲಾಖೆಯ ಸಂಜೀವ ಸಂಸುದ್ದಿ, ಅಂತಿಮ ಪಂದ್ಯದ ಪಂದ್ಯ ಪುರುಷರಾಗಿ ಪೊಲೀಸ್ ಇಲಾಖೆ ತಂಡದ ಲಕ್ಷ್ಮಣ ಬಿಳ್ಳೂರ ಪ್ರಶಸ್ತಿ ಪಡೆದರು. ಪಂದ್ಯಾವಳಿಯಲ್ಲಿ ಒಟ್ಟು ಗೋಕಾಕ ತಾಲೂಕಿನ ವಿವಿಧ ಇಲಾಖೆಗಳ ಒಟ್ಟು 16 ತಂಡಗಳು ಭಾಗವಹಿಸಿದ್ದವು.

ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮಾತನಾಡಿ, ಸರಕಾರಿ ಅಧಿಕಾರಿಗಳು ಇಂಥ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದರೆ ಮುಂದೆ ಭವಿಷ್ಯದಲ್ಲಿ ಉತ್ತಮ ಆಟಗಾರರಾಗಿ ತಮ್ಮ ಇಲಾಖೆಗೆ ಉತ್ತಮ ಹೆಸರು ತರಲು ಸಾಧ್ಯ. ಬಿಡುವಿಲ್ಲದ ಸಮಯದಲ್ಲಿ ಸಹ ಸರಕಾರಿ ರಜಾದಿನಗಳಲ್ಲಿ ಸ್ನೇಹ ಪೂರ್ವಕ ಪಂದ್ಯಾವಳಿಯಲ್ಲಿ ಭಾಗವಹಿಸಿ ಒಳ್ಳೆಯ ಆಟವನ್ನು ತೋರುವುದರ ಮುಖಾಂತರ ಕ್ರಿಕೆಟ್ ಆಟವನ್ನು ಬೆಳೆಸಲು ಸಹಕಾರ ನೀಡಿದ್ದೀರಿ. ತಾಲೂಕಿನ ಎಲ್ಲಾ ಅಧಿಕಾರ ವರ್ಗ ಚನ್ನಾಗಿ ಕೆಲಸ ಮಾಡಿ ಗೋಕಾಕ ನಗರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು ಎಲ್ಲಾ ಅಧಿಕಾರಿಗಳು ಕ್ರೀಡಾ ಮನೋಭಾವದಿಂದ ಈ ಸ್ನೇಹ ಪೂರ್ವ ಪಂದ್ಯಾವಳಿಯಲ್ಲಿ ಭಾಗವಹಿಸಿ ಪಂದ್ಯಗಳನ್ನು ಆಡಿದ್ದೀರಿ ನಿಮ್ಮಲ್ಲಿಯ ಕ್ರೀಡಾ ಪ್ರೇಮ ಹೀಗೆಯೆ ಮುಂದುವರೆಯಲ್ಲಿ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದ ಹಾರೈಸಿದರು.
ಈ ಸಂದರ್ಭದಲ್ಲಿ ಯುವ ನಾಯಕ ಅಮರನಾಥ ಜಾರಕಿಹೊಳಿ , ತಹಶೀಲ್ದಾರ ಡಾ. ಮೋಹನ ಭಸ್ಮೆ, ಡಿ.ವಾಯ್.ಎಸ್.ಪಿ ಡಿ.ಎಚ್.ಮುಲ್ಲಾ,,ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಸಿಪಿಐ ಶ್ರೀಶೈಲ ಬ್ಯಾಕೂಡ, ಹೈಸ್ಕಾಂ ಅಧಿಕಾರಿ ಎಸ್.ಪಿ.ವರಾಳೆ, ಬಿಸಿಯೂಟ ಅಧಿಕಾರಿ ಎ.ಬಿ.ಮಲಬನ್ನವರ, ವೈದ್ಯಾಧಿಕಾರಿ ರವೀಂದ್ರ ಅಂಟಿನ, ಸರಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ಮುರಗೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts:

ಘಟಪ್ರಭಾ:ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು : ದಯಾನಂದ ಬೆಳಗಾವಿ …

ಗೋಕಾಕ:ಕರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ : ಡಾ‌. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಭಯ

ಗೋಕಾಕ:ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರಿಗ…