RNI NO. KARKAN/2006/27779|Tuesday, July 8, 2025
You are here: Home » breaking news » ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು 

ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಗೋಕಾಕ ಡಿ 4 : ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಾವು 2018-19ರಲ್ಲಿ ಪಡೆದಿದ್ದ ₹3.5 ಲಕ್ಷ ಸಾಲಕ್ಕೆ ಅಸಲು-ಬಡ್ಡಿ ಸೇರಿಸಿ ಒಟ್ಟು₹17 ಲಕ್ಷ ಪಾವತಿಸಿದ್ದರೂ ಸಾಲ ಮತ್ತು ಬಡ್ಡಿವಸೂಲಿಗೆ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೂವರ ವಿರುದ್ಧ ಶನಿವಾರ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ನಾಗಪ್ಪ ಸಿದ್ದಪ್ಪ ಮಂಗಿ ಮತ್ತು ಸಹೋದರರಾದ ಸಿದ್ದಪ್ಪ ಮತ್ತು ಸುನೀಲ ಎಂಬುವವರ ವಿರುದ್ಧ ವೈಶಾಲಿ ಪ್ರಶಾಂತ ಸಪಕಾಳ ದೂರು ದಾಖಲಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಕ್ಕೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts: