RNI NO. KARKAN/2006/27779|Saturday, June 15, 2024
You are here: Home » breaking news » ಗೋಕಾಕ:ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ತಾಲೂಕಿನ ಕೀರ್ತಿಯನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿ : ಸುರೇಶ್ ಸನದಿ

ಗೋಕಾಕ:ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ತಾಲೂಕಿನ ಕೀರ್ತಿಯನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿ : ಸುರೇಶ್ ಸನದಿ 

ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ತಾಲೂಕಿನ ಕೀರ್ತಿಯನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿ : ಸುರೇಶ್ ಸನದಿ

ಗೋಕಾಕ ಸೆ 7 : ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ತಾಲೂಕಿನ ಕೀರ್ತಿಯನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುವಂತೆ ಗ್ರಾ.ಪಂ ಸದಸ್ಯ ಸುರೇಶ ಸನದಿ ಹೇಳಿದರು.
ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ತಾಲೂಕು ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗೋಕಾಕ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಪಾಲ್ಗೋಳುವುದರಿಂಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಸಾಧನೆಗೆ ಸಹಕಾರಿಯಾಗುತ್ತದೆ. ಸೋಲು , ಗೆಲುವಿಗೆ ಮಹತ್ವ ಕೊಡದೆ ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿ ಈ ಕ್ರೀಡಾಕೂಟದಲ್ಲಿ ಪಾಲ್ಗೋಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಶಿಕ್ಷಣ ಇಲಾಖೆಯ ಎಲ್.ಕೆ ತೋರಣಗಟ್ಟಿ, ಎನ್‌. ಆರ್. ಪಾಟೀಲ, ಎಸ್.ಬಿ.ಕಲ್ಲಟ್ಟಿ, ಎಂ‌.ಎಲ್‌ಪಾಗದ, ಎಸ್.ಎ.ನಾಯಿಕ, ಕೆ.ಎಸ್.ದಡ್ಡಿ, ಕ್ರೀಡಾ ಇಲಾಖೆ ಬಸವರಾಜ ಹೋಸಮಠ, ಬಸವರಾಜ ಜಕ್ಕನ್ನವರ, ಶಾನೂಲ್ ನಗಾರಿ, ನಗರಸಭೆ ಸದಸ್ಯರಾದ ಜಯಾನಂದ ಹುಣ್ಣಚ್ಯಾಳಿ, ಅಬ್ಬಾಸ ದೇಸಾಯಿ, ಬಸವರಾಜ ಆರೆನ್ನವರ, ಮುಖಂಡರಾದ ದುರ್ಗಪ್ಪಶಾಸ್ತ್ರಿಗೋಲ್ಲರ, ಯಲ್ಲಪ್ಪ ಹಳ್ಳೂರ, ವಿಠಲ್ ಮುರ್ಕೀಭಾಂವಿ, ಸಿದ್ದಣ್ಣ ದುರದುಂಡ, ಪೋಲೀಸ ಇಲಾಖೆಯ ಬಿ.ಎಸ್.ಹೆಬ್ಬಾಳ ಇದ್ದರು.

Related posts: