ಗೋಕಾಕ:ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಜಕೆಗಳು ಸಹ ಮುಖ್ಯ: ಸನತ ಜಾರಕಿಹೊಳಿ

ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಜಕೆಗಳು ಸಹ ಮುಖ್ಯ: ಸನತ ಜಾರಕಿಹೊಳಿ
ಗೋಕಾಕ ಜು 16 : ವಿದ್ಯಾರ್ಥಿಗಳಲ್ಲಿ ಪ್ರಯತ್ನವಿದರೆ ಕೆಎಎಸ್, ಐಎಎಸ್ ಅಂತಃ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ಸಿಯಾಗಬಹುದು. ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಜಕೆಗಳು ಸಹ ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಲಕ್ಷ್ಮಿ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅಭಿಪ್ರಾಯಪಟ್ಟರು.
ರವಿವಾರದಂದು ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಕಾಲೇಜುನ ಸನ್ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದಾಗ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಲು ಸಾಧ್ಯ. ಕಲೆ, ಸಾಹಿತ್ಯ, ಸಂಗೀತ ಸಾಂಸ್ಕೃತಿಕ ಲೋಕದ ಜಗತ್ತನ್ನು ಪರಿಚಯಿಸುತ್ತದೆ. ಬೇಸರವಾದಾಗ ಆಸರೆಯಂತೆ ಸಾಹಿತ್ಯ ಸಂಗೀತಗಳು ಮಾನವನಿಗೆ ಸಂಜೀವಿನಿಯಾಗುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ದಿಸೆಯಲ್ಲಿ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸಿಕೊಳ್ಳುವುದರಿಂದ ತಮ್ಮ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿಯಾಗುತ್ತದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಐ ಭಂಡಾರೆ, ಪ್ರಾಚಾರ್ಯ ಅರುಣ್ ಪೂಜೇರ, ಕೆ.ಎಲ್.ಗುಂಡ್ಯಾಗೋಳ, ಎಸ್.ಎಂ ಮುಲ್ಲಾ, ಎಸ್.ಬಿ.ಬಾಗಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕೆಂಪಣ ಕಡಬಿ, ಸಮೀನಾ ಹುಲಕುಂದ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಕುಮಾರಿ ಮುತ್ತೆವ್ವಾ ಆಡಿನ, ಸುಮಿತ್ರಾ ಲಮಾಣಿ ನಿರೂಪಿಸಿದರು, ಕುಮಾರಿ ಲಕ್ಷ್ಮಿ ಕಡಕೋಳ ಸ್ವಾಗತಿಸಿದರು.ಕುಮಾರಿ ತನುಜಾ ಪೆದ್ದೆನವರ ವಂದಿಸಿದರು.