RNI NO. KARKAN/2006/27779|Sunday, May 10, 2026
You are here: Home » breaking news » ರಾಯಬಾಗ: ತಾಲೂಕಿನ 18 ಗ್ರಾಮಗಳನ್ನು ರಾಯಬಾಗ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ

ರಾಯಬಾಗ: ತಾಲೂಕಿನ 18 ಗ್ರಾಮಗಳನ್ನು ರಾಯಬಾಗ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ 

ರಾಯಬಾಗ ತಾಲೂಕಿನ 18 ಗ್ರಾಮಗಳನ್ನು ರಾಯಬಾಗ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ 

ರಾಯಬಾಗ ಸೆ 15: ರಾಯಬಾಗ ತಾಲೂಕಿನ 18 ಗ್ರಾಮವನ್ನು ರಾಯಬಾಗ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಪಟ್ಟಣದ ಕನ್ನಡಪರ ಸಂಘಟನೆಗಳು , ಬಿಜೆಪಿ ಕಾರ್ಯಕರ್ತರು , ವಲಕೀಲರ ಸಂಘದ ಸದಸ್ಯರು ಹಾಗೂ ತಾಲೂಕಿನ ವಿವಿಧ ಗ್ರಾಮಸ್ಥರು ಪ್ರತಿಭಟನೆ ನಡೆಯಿಸಿ ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ಮನವಿ ಅರ್ಪಿಸಿದರು.

ರಾಯಬಾಗ ತಾಲೂಕಿನ ಸುಮಾರು 18 ಗ್ರಾಮಗಳನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ನಮಗೆ ತೊಂದರೆ ಆಗುತ್ತದೆ. ನಮ್ಮೆಲ್ಲ ಕೆಲಸ ಕಾರ್ಯಗಳಿಗೆ ರಾಯಬಾಗ ಪಟ್ಟಣವನ್ನು ನಾವು ಹೊಂದಿಕೊಂಡಿದ್ದೆವೆ ಹಾಗೂ ರಾಯಬಾಗ ನಮಗೆ ಅತ್ಯಂತ ಯೋಗ್ಯವಾಗಿದೆ ಮೂಡಲಗಿಗೆ ನಾವು ಹೋಗುವುದಿಲ್ಲ. ನಮ್ಮನ್ನು ಯಾವುದೇ ಕಾರಣಕ್ಕೂ ಮೂಡಲಗಿಗೆ ಸೇರಿಸಬೇಡಿ. ನಮಗೆ ರಾಯಬಾಗ ತಾಲೂಕಿನಲ್ಲಿ ಮುಂದುವರೆಯಲ್ಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ

ಈ ಸಂದರ್ಭದಲ್ಲಿ ನ್ಯಾಯವಾದಿಗಳು , ಕನ್ನಡಪರ ಸಂಘಟನೆಯ ಮುಖಂಡರು , ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: