RNI NO. KARKAN/2006/27779|Wednesday, December 31, 2025
You are here: Home » breaking news » ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ 

ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ಗೋಕಾಕ ಏ 8 : ನಗರದ ಕೊಳವಿ‌ ಹಣಮಂತ ದೇವರ ಗುಡಿ ಹತ್ತಿರ ಮನೆಯೊಂದರಲ್ಲಿ ಶನಿವಾರದಂದು ಬೆಳಿಗ್ಗೆ ವಿದ್ಯುತ್ ಶಾಟ್ ಸರ್ಕ್ಯಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ.

ಮನೆಯಲ್ಲಿಯ ಪ್ರೀಜ್ ನಲ್ಲಿ ವಿದ್ಯುತ್ ಲೋಡ ಹೆಚ್ಚಾದ ಪರಿಣಾಮ ಶಾಟ್ ಸರ್ಕೀಟ್ ಆಗಿದೆ ಎಂದು ಹೇಳಲಾಗುತ್ತಿದ್ದು, ಬೆಂಕಿಯ ರಭಸಕ್ಕೆ ಮನೆಯಲ್ಲಿಯ ಸಿಲಿಂಡರ್ ಒಂದು ಸ್ಪೋಟಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಅಗ್ನಿ ಶಾಮಕದಳದ ಸಿಬ್ಬಂದಿಗಳಿಗೆ ಅಗ್ನಿ ನಂದಿಸಲು ನಗರದ ಪೋಲಿಸ್ ಸಿಬ್ಬಂದಿ ಹಾಗೂ ವಿದ್ಯುತ್ ಸರಬರಾಜು ಸಿಬ್ಬಂದಿ ಮತ್ತು ನಗರಸಭೆ ಸಿಬ್ಬಂದಿಯವರು ಸಾತ್ ನೀಡಿದ್ದಾರೆ.
ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: