RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡಿಬಟ್ಟಿ

ಗೋಕಾಕ:ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡಿಬಟ್ಟಿ 

ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡಿಬಟ್ಟಿ

ಗೋಕಾಕ ಮಾ 11 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾದರೆ ಯಶಸ್ವಿಯಾಗುತ್ತೀರೆಂದು ಎಸ್.ಎಲ್.ಜೆ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಎಚ್.ಎಸ್.ಅಡಿಬಟ್ಟಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರೌಢಶಾಲೆಗಳ ಎಸ್.ಎಸ್.ಎಲ್‌.ಸಿ.ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಗಳಾಗಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದಲ್ಲಿ ವಿಶೇಷ ಘಟ್ಟವಾಗಿದ್ದು ಅದನ್ನು ಧೈರ್ಯದಿಂದ ಎದುರಿಸಿ.  ತಮ್ಮ ಆಸಕ್ತಿ ಇರುವ ವಿಷಯದ ಆಯ್ಕೆಯೊಂದಿಗೆ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಿ ಪಠ್ಯದೊಂದಿಗೆ ಪಠೇತರ ಚಟುವಟಿಕೆಗಳಿಲ್ಲಿ ಪಾಲ್ಗೊಳುವ ಮೂಲಕ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಂಡು ಪರಿಪೂರ್ಣ ವ್ಯಕ್ತಿಗಳಾಗಿರಿ.  ತಂದೆ ತಾಯಿಗಳ ಸಹಕಾರ ತಮ್ಮಲ್ಲಿರುವ ಕೌಶಲಗಳೊಂದಿಗೆ ತಮ್ಮ ಬದುಕನ್ನು ರೂಪಿ‌ಸಿಕೊಳ್ಳಿ ಎಂದು ಹೇಳಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ, ಪ್ರಧಾನಗುರುಗಳಾದ ಆರ್‌.ಎಂ ದೇಶಪಾಂಡೆ, ಎಚ್.ವ್ಹಿ.ಪಾಗನಿಸ, ಪಿ.ವ್ಹಿ ಚಚಡಿ ಇದ್ದರು.

Related posts: