ಗೋಕಾಕ:ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ
ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ
ಗೋಕಾಕ ಅ 11 : ಇಲ್ಲಿಯ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಇವುಗಳ ವತಿಯಿಂದ ನಗರದ ನಾಕಾ ನಂ.1ರಲ್ಲಿ ಸ್ವಚ್ಛತಾ ಕಾರ್ಯಕ್ರಮವು ಬುಧವಾರದಂದು ಬಜರಂಗದಳದ ಜಿಲ್ಲಾ ಸಂಚಾಲಕ ಸದಾಶಿವ ಗುದಗಗೋಳ ನೇತ್ರತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್‍ನ ವಿಭಾಗೀಯ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ, ಕಿರಣ ಮಿರಜಕರ, ಜಗದೀಶ ಬಳಿಗಾರ, ಶಂಕರ ಧರೇನ್ನವರ, ಲಕ್ಷ್ಮಣ ಮಿಸಾಳೆ, ಗುರು ಬೆಣವಾಡ, ಆನಂದ ಕುಡಚಿ, ಸುನೀಲ ದುಮಾಳೆ, ಸಂತೋಷ ಗೊಂದಳಿ, ಮಹೇಶ ಬಡೆಪ್ಪಗೋಳ, ಶಿವು ಮಾಯಗೊಂಡ, ಕಲ್ಲಪ್ಪ ಹೊನಕುಪ್ಪಿ, ಸೇರಿದಂತೆ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್‍ನ ಕಾರ್ಯಕರ್ತರು ಇದ್ದರು.
