RNI NO. KARKAN/2006/27779|Wednesday, December 31, 2025
You are here: Home » breaking news » ಗೋಕಾಕ:ತೋಟಪಟ್ಟಿ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕ: ಸರ್ವೋತ್ತಮ ಜಾರಕಿಹೊಳಿ

ಗೋಕಾಕ:ತೋಟಪಟ್ಟಿ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕ: ಸರ್ವೋತ್ತಮ ಜಾರಕಿಹೊಳಿ 

ತೋಟಪಟ್ಟಿ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕ: ಸರ್ವೋತ್ತಮ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 5 :
ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ತೋಟಪಟ್ಟಿ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕವಾಗಿವೆ ಅದರಂತೆ ಬೆಟಗೇರಿ ಗ್ರಾಮಸ್ಥರಿಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶನಿವಾರದಂದು ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ತೋಟಪಟ್ಟಿ ರಸ್ತೆಗಳ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಟಗೇರಿ ಗ್ರಾಮದಲ್ಲಿ ಇಂದು ವಿವಿಧ ತೋಟಪಟ್ಟಿ ನೂತನ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಇಲ್ಲಿಯ ರೈತರು ಸಹಕರಿಸಿ, ತೋಟಪಟ್ಟಿ ರಸ್ತೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಅಬ್ದುಲ್ ಮಿರ್ಜಾನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಶಿವನಪ್ಪ ಮಾಳೇದ, ವಿಜಯ ಹಿರೇಮಠ, ಲಕ್ಷ್ಮಣ ಸೋಮಗೌಡ್ರ, ಶ್ರೀಧರ ದೇಯಣ್ಣವರ, ಸದಾಶಿವ ಕುರಿ, ಸುಭಾಷ ಕರೆಣ್ಣವರ, ಪುಂಡಲೀಕ ಹಾಲಣ್ಣವರ, ರಾಮಣ್ಣ ನೀಲಣ್ಣವರ, ಸುಭಾಷ ಜಂಬಗಿ, ಈರಣ್ಣ ಬಳಿಗಾರ, ಹನುಮಂತ ವಗ್ಗರ, ರಾಮಣ್ಣ ಕತ್ತಿ, ರಾಮಣ್ಣ ಬಳಿಗಾರ, ಧರೆಪ್ಪ ಚಂದರಗಿ, ಬಸವರಾಜ ದೇಯಣ್ಣವರ, ಹನುಮಂತ ಚಂದರಗಿ, ಮಾರುತಿ ಬಣಜಿಗೇರ, ಭೀರಪ್ಪ ಕುರಬೇಟ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಪ್ರಕಾಶ ಗುಡದಾರ, ಭೀಮಶೆಪ್ಪ ಹೊಂಗಲ, ಗುರಪ್ಪ ಮಾಕಾಳಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗಣ್ಯರು, ರೈತರು, ಗ್ರಾಮಸ್ಥರು ಇದ್ದರು.

Related posts: