ಗೋಕಾಕ:ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರ ಭವಿಷ್ಯದ ಭದ್ರ ಬೂನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ : ಮೌಲಾನ ಸಜ್ಜಾದ ನೋಮಾನಿ

ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರ ಭವಿಷ್ಯದ ಭದ್ರ ಬೂನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ : ಮೌಲಾನ ಸಜ್ಜಾದ ನೋಮಾನಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :
ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರ ಭವಿಷ್ಯದ ಭದ್ರ ಬೂನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಂಬೈ ನೇರಲ್ ನ ಮೌಲಾನ ಶೇಖ ಖಲೀಲ್ ರ್ವು ರಹಮಾನ್ ಸಜ್ಜಾದ ನೋಮಾನಿ ಹೇಳಿದರು.
ರವಿವಾರಂದು ಸಮೀಪದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇಲ್ಲಿನ ರಹಮಾನ್ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ ಮಹಿಳಾ ಸಮಾವೇಶದಲ್ಲಿ “ನಿಮ್ಮ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಅವರನ್ನು ಜ್ಞಾನವಂತರಾಗಿ ಮಾಡಿ ಅವರಲ್ಲಿ ಒಳ್ಳೆಯ ಮಾನವೀಯತೆಯನ್ನು ಬೆಳೆಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು . ಮಕ್ಕಳನ್ನು ಜ್ಞಾನವಂತರಾಗಿ ಮಾಡುವದರ ಜೊತೆಗೆ ಮಾನವೀಯ ಸಂಬಂಧಗಳನ್ನು ಕಲಿಸುವ ಅವಶ್ಯಕತೆ ಇದೆ. ಆ ಕಾರ್ಯ ತಾಯಂದಿರಿಂದ ಮಾತ್ರ ಸಾಧ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಅವಕಾಶಗಳೆಂದು ಭಾವಿಸಿ ಅವುಗಳನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯವನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರಕೂಡಾ ದೊಡ್ಡದಾಗಿದ್ದು, ತಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ತುಂಬುವ ಮೂಲಕ ಸಮಾಜವನ್ನು ಸದೃಢವಾಗಿ ಕಟ್ಟಬಹುದುದಾಗಿದೆ. ಧರ್ಮ ಮಹಿಳೆಯರಿಗೆ ಉನ್ನತಸ್ಥಾವನ್ನು ಕೊಟ್ಟಿದು ಅದನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಇತಿಹಾಸ ನಿರ್ಮಿಸುವ ಕಾರ್ಯಮಾಡಬೇಕು. ಸಮಾಜ, ಸಮುದಾಯ ಮಹಿಳೆಯನ್ನು ಯಾವುದೇ ಬಂಧನದಲ್ಲಿ ಇರಿಸಿಲ್ಲಾ , ಪತ್ರಿಯೊಂದು ಕ್ಷೇತ್ರದಲ್ಲಿ ಇಂದು ಮಹಿಳೆಯರು ಉನ್ನತ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಸಂಸ್ಕಾರವಿಲ್ಲದ ಸಾಧನೆಯು ಸಮಾಜ ಮತ್ತು ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತದೆ ಎಂಬುದನ್ನು ಅರಿತು ಇಂದು ಮಕ್ಕಳನ್ನು ಬೆಳೆಸಬೇಕಾಗಿದೆ. ತಮ್ಮ ಗಳಿಕೆಯ ಅರ್ಧದಷ್ಟು ಹಣವನ್ನು ಬಡವರಿಗೆ ದಾನಮಾಡುವ ಮನೋಭಾವನ್ನು ಬೆಳೆಸಿಕೊಂಡು ಸಮಾಜದಲ್ಲಿಯ ಕಡುಬಡವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಜ್ಞಾನದಿಂದ ಮಾತ್ರ ಸಾಧ್ಯ ಆ ಜ್ಞಾನವನ್ನು ತಮ್ಮ ಮಕ್ಕಳಲ್ಲಿ ಬಿತ್ತುವ ಕಾರ್ಯ ತಾಯಂದಿರು ಮಾಡಬೇಕು. ಸಮಾಜದಲ್ಲಿ ದುಷ್ಕೃತ್ಯಗಳನ್ನು ತಡೆಯುವಲ್ಲಿ ತಾಯಂದಿರ ಪಾತ್ರ ಬಹುಮುಖ್ಯವಾಗಿದೆ. ಜೀವನದಲ್ಲಿ ಎಲ್ಲರೂ ಸಂಸ್ಕಾರವಂತರಾದರೆ ಸಮಾಜದಲ್ಲಿ ಯಾವುದೇ ದುಶಕೃತ್ಯಗಳು ನಡೆಯಲು ಸಾಧ್ಯವಿಲ್ಲ ಆ ದಿಸೆಯಲ್ಲಿ ನಾವೆಲ್ಲರೂ ಸಹ ಮುಂದಾಗಬೇಕು ಎಂದ ಅವರು ರಹೆಮಾನ ಪೌಂಡೇಶನ್ ವತಿಯಿಂದ ಮಹಿಳೆಯರಿಗಾಗಿ ಕೌಶಲ್ಯ ತರಬೇತಿಗಳನ್ನು ನಡೆಸಲಾಗುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸದೃಢ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು.
ಧರ್ಮ ಹಾಕಿಕೊಟ್ಟ ದಾರಿಯಲ್ಲಿ ಮನುಷ್ಯ ತಮ್ಮ ಜೀವನವನ್ನು ನಡೆಸಿ ಮಾನವ ಜನ್ಮ ಸಾರ್ಥಕ ಪಡೆಸುಕೊಳ್ಳಬೇಕು .ಮಾನವ ಶಿಕ್ಷಣದ ಜೊತೆಗೆ ಜಾತ್ಯಾತೀತವಾಗಿ ಸಮಾಜದಲ್ಲಿ ಬಾಳಿ ಬದುಕಿ ಸುಂದರ ಸಮಾಜ ನಿರ್ಮಾಣ ಮಾಡಬೇಕು. ಮನುಷ್ಯನಾಗಿದ್ದರು ಕೆಲವೊಮ್ಮೆ ಮಾನವ ಮಾನವನಾಗಿ ಇರುವದಿಲ್ಲ, ಮಾನವ ತಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡಬೇಕು. ಜ್ಞಾನ ಇಲ್ಲದ ಜೀವನ ವ್ಯರ್ಥವಾಗಿದ್ದು, ಜ್ಞಾನವನ್ನು ಪಡೆದುಕೊಂಡು ಸರಿಯಾದ ದಾರಿಯಲ್ಲಿ ಸಾಗಿ ಮುಂಬರುವ ಪೀಳಿಗೆಗೆ ಭದ್ರ ಬೂನಿಯಾದಿ ಹಾಕಿಕೊಡಬೇಕು ಎಂದು ಹೇಳಿದರು.
ಸಮಾವೇಶದಲ್ಲಿ ತಾಲೂಕಿನಾದ್ಯಂತ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೌಲಾನಾ ಅವರ ಸುಪುತ್ರಿ ಸೇರಿದಂತೆ ರಹಮಾನ್ ಪೌಂಡೇಶನ್ ನ ಮುಖಂಡರು ಉಪಸ್ಥಿತರಿದ್ದರು.