RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ವನ್ಯ ಜೀವಿಗಳ ಸಂರಕ್ಷಣೆಗಾಗಿ ಸೈಕಲ್ ಜಾಥಾಕ್ಕೆ ಮುರುಘರಾಜೇಂದ್ರ ಶ್ರೀಗಳಿಂದ ಚಾಲನೆ

ಗೋಕಾಕ:ವನ್ಯ ಜೀವಿಗಳ ಸಂರಕ್ಷಣೆಗಾಗಿ ಸೈಕಲ್ ಜಾಥಾಕ್ಕೆ ಮುರುಘರಾಜೇಂದ್ರ ಶ್ರೀಗಳಿಂದ ಚಾಲನೆ 

ವನ್ಯ ಜೀವಿಗಳ ಸಂರಕ್ಷಣೆಗಾಗಿ ಸೈಕಲ್ ಜಾಥಾಕ್ಕೆ ಮುರುಘರಾಜೇಂದ್ರ ಶ್ರೀಗಳಿಂದ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 8 :
ವನ್ಯ ಜೀವಿ ಸಪ್ತಾಹ ನಿಮಿತ್ಯ ಇಲ್ಲಿಯ ಅರಣ್ಯ ಇಲಾಖೆಯವರು ಹಮ್ಮಿಕೊಂಡ ವನ್ಯ ಜೀವಿಗಳ ಸಂರಕ್ಷಣೆಗಾಗಿ ಸೈಕಲ್ ಜಾಥಾವನ್ನು ಅರಣ್ಯ ಇಲಾಖೆ ಆವರಣದಲ್ಲಿ ಶುಕ್ರವಾರದಂದು ನಗರದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.
ವನ್ಯ ಜೀವಿಗಳ ಸಂರಕ್ಷಣೆ ಸೈಕಲ್ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಬಿತ್ತಿ ಪತ್ರಗಳೊಂದಿಗೆ ಸಂಚರಿಸಿ ವನ್ಯ ಜೀವಿಗಳ ರಕ್ಷಣೆ ಹಾಗೂ ಪರಿಸರ ರಕ್ಷಣೆ ಜಾಗೃತಿ ಮೂಢಿಸಿತು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಸಹಾಯಕ ಸುರೇಶ ಸನದಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಎಸಿಎಫ್ ರಾಜೇಶ್ವರಿ ಈರನಟ್ಟಿ, ಆರ್‍ಎಫ್‍ಒ ಸಂಜೀವ ಸಂಸುದ್ದಿ, ಡಿಆರ್‍ಎಫ್‍ಒ ಎಚ್ ಎಸ್ ಇಂಗಳಗಿ, ಶಹರ ಠಾಣೆ ಪಿಎಸ್‍ಐ ಎಮ್ ಡಿ ಘೋರಿ, ಗಣ್ಯರಾದ ಸೋಮಶೇಖರ ಮಗದುಮ, ಮಲ್ಲಿಕಾರ್ಜುನ ಕಲ್ಲೋಳಿ, ಬಸವರಾಜ ಖಾನಪ್ಪನವರ, ಕೆಂಪಣ್ಣ ಚೌಕಾಶಿ, ಕಿರಣ ಡಮಾಮಗರ, ಅನುಪ ಕೌಶಿಕ, ರಜನಿಕಾಂತ ಮಾಳವದೆ, ವಿದ್ಯಾರ್ಥಿಳು ಶಿಕ್ಷಕರು, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Related posts: