RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಶಿಕ್ಷಣ ಪದ್ಧತಿ ವ್ಯಾಪಾರೀಕರಣ ಆಗಿದ್ದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ : ಮೌಲಾನ ಪಿ.ಎಂ ಮುಜಂಮಿಲ್

ಗೋಕಾಕ:ಶಿಕ್ಷಣ ಪದ್ಧತಿ ವ್ಯಾಪಾರೀಕರಣ ಆಗಿದ್ದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ : ಮೌಲಾನ ಪಿ.ಎಂ ಮುಜಂಮಿಲ್ 

ಶಿಕ್ಷಣ ಪದ್ಧತಿ ವ್ಯಾಪಾರೀಕರಣ  ಆಗಿದ್ದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ  : ಮೌಲಾನ ಪಿ.ಎಂ ಮುಜಂಮಿಲ್

ನಮ್ಮ ಬೆಳಗಾವಿ ಇ -ವಾರ್ತೆ, ಗೋಕಾಕ ಸೆ 25:

ಇಂದಿನ ಶಿಕ್ಷಣ ಪದ್ಧತಿ ವ್ಯಾಪಾರೀಕರಣ  ವಾಗುತ್ತಿರುವದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಬೆಂಗಳೂರಿನ  ಹಜರತ  ಅಕದಸ್ ಮೌಲಾನ ಪಿ.ಎಂ ಮುಜಂಮಿಲ್ ಸಾಹಬ ರಾಶದಿ   ಹೇಳಿದರು .
ಶನಿವಾರದಂದು ಇಲ್ಲಿನ ಎಪಿಜೆ ಫೌಂಡೇಶನ್ ವತಿಯಿಂದ ನಗರದ ಅಹೆಮದ ಶಾ ಶಾದಿ ಮಹಲದಲ್ಲಿ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಉಪನ್ಯಾಸ ನೀಡಿ  ಅವರು ಮಾತನಾಡಿದರು.
ಮುಸ್ಲಿಂ ಸಮುದಾಯದರು ಸಹ  ಡಾಕ್ಟರ್ , ಇಂಜಿನೀಯರ, ವಕೀಲರು, ವಿಜ್ಞಾನಿಗಳು  ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾಗಿದೆ ಆದರೆ ಅಧಿಕಾರಿಶಾಹಿಗಳ ಕೈ ಸಿಲುಕಿರುವ ಉನ್ನತ  ಶಿಕ್ಷಣ ಇಂದು ಬಡವ ಮತ್ತು ಹಿಂದುಳಿದ ಸಮಾಜದವರಿಗೆ ಕನಸಿನ ಮಾತಾಗಿದೆ.  
ಈ ಸಮಸ್ಯೆ ಒಂದು ಕಡೆಯಾದರೆ ಸಮಾಜ ಮುಖಂಡರ  ಬೇಜವಾಬ್ದಾರಿಯಿಂದ  ಸಮುದಾಯದ ಜನರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಎಲ್ಲಿ ಬೇಕೆಂದಲ್ಲಿ ಹಣವನ್ನು ಖರ್ಚು ಮಾಡುವುದನ್ನು ಬಿಟ್ಟು ಮಕ್ಕಳ ಶಿಕ್ಷಣಕ್ಕೆ 
ಹೆಚ್ಚಿನ ಹಣವನ್ನು ಖರ್ಚುಮಾಡಿದರೆ  ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯ ಎಂದ ಅವರು ಮಕ್ಕಳನ್ನು ಬರೀ ಶಿಕ್ಷಣ ಕಡೆ ಕೇಂದ್ರಿಕರಿಸದೆ ಒಳ್ಳೆಯ  ಸಂಸ್ಕಾರ ಕೊಡಿಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ. ಸಂಸ್ಕಾರ ವಿಲ್ಲದ ಶಿಕ್ಷಣ ಸಮಾಜದ ಸ್ವಾಸ್ಥ್ಯವನ್ನು  ಹಾಳು ಮಾಡುತ್ತದೆ ಹಾಗಾಗಿ ಮಕ್ಕಳನ್ನು ಸಂಸ್ಕಾರವಂತರಾಗಿಸವಲ್ಲಿಯೂ ಸಹ ಕಾಳಜಿ ವಹಿಸಿಬೇಕು. ದೇಶಕ್ಕೆ ಮೊದಲ ಶಿಕ್ಷಣ ಸಚಿವರನ್ನು ನೀಡಿದ ಸಮುದಾಯ ಇಂದು ವ್ಯಾಪಾರೀಕರಣದ ಶಿಕ್ಷಣದಲ್ಲಿ ಸಿಲುಕಿ ಉನ್ನತ ಶಿಕ್ಷಣದಿಂದ ವಂಚಿತವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ  ಮುಫ್ತಿ ಖ್ವಾಜಾ ಅಬ್ದುಲ್ ಮತೀನ ಇನಾಮಿ, ಖಾರಿ ಜಬಿವುಲ್ಲಾ, ನಗರಸಭೆ ಸದಸ್ಯ ಕುತಬುದ್ದೀನ ಗೋಕಾಕ, ಎಚ್.ಡಿ ಮುಲ್ಲಾ,ನಜೀರ್ ಶೇಖ ಮೌಲಾನಾ ಐಜಾಜ , ಮೌಲಾನ ಮಹೆಬೂಬ , ಹಾಫೀಜ ಜಲಿಲ,ಮೌಲಾನ ಆಸೀಪ, ಎಪಿಜೆ ಪೌಂಡೇಶನ್ ನ ಅಧ್ಯಕ್ಷ ಇರ್ಷಾದ್ ಪಟೇಲ್, ಕಾರ್ಯದರ್ಶಿ ಶರೀಫ ಮುದೋಳ, ಉಪಾಧ್ಯಕ್ಷ ಹಿದಾಯತ್ ಮಲ್ಲಾಪೂರ,ಬಾಬು ಶೇಖಬಡೆ,ಫಾರುಕ ಬೋಜಗರ, ಇರ್ಷಾದ್ ಮುಜಾವರ,ಜಾವೇದ ಬೇಪಾರಿ,ಫಯಾಜ ಪಟೇಲ, ಸದಾಕತ ಅಲಿ ಮಕಾನದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: