RNI NO. KARKAN/2006/27779|Saturday, April 20, 2024
You are here: Home » breaking news » ಗೋಕಾಕ:ಬಿಜೆಪಿ ಮುಖಂಡರ ಪಕ್ಷವಲ್ಲ, ಸಾಮಾನ್ಯ ಕಾರ್ಯಕರ್ತರ ಪಕ್ಷ : ರಾಜ್ಯಸಭೆ ಸದಸ್ಯ ಈರಣ್ಣಾ

ಗೋಕಾಕ:ಬಿಜೆಪಿ ಮುಖಂಡರ ಪಕ್ಷವಲ್ಲ, ಸಾಮಾನ್ಯ ಕಾರ್ಯಕರ್ತರ ಪಕ್ಷ : ರಾಜ್ಯಸಭೆ ಸದಸ್ಯ ಈರಣ್ಣಾ 

ಬಿಜೆಪಿ ಮುಖಂಡರ ಪಕ್ಷವಲ್ಲ, ಸಾಮಾನ್ಯ ಕಾರ್ಯಕರ್ತರ ಪಕ್ಷ : ರಾಜ್ಯಸಭೆ ಸದಸ್ಯ ಈರಣ್ಣಾ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 14 :

 

 
ಭಾರತೀಯ ಜನತಾ ಪಕ್ಷವು ಮುಖಂಡರ ಪಕ್ಷವಲ್ಲ, ಸಾಮಾನ್ಯ ಕಾರ್ಯಕರ್ತರ ಪಕ್ಷವಾಗಿದ್ದು ಕಾರ್ಯಕರ್ತರೇ ಪಕ್ಷದ ಜೀವಾಳು ಆಗಿದ್ದಾರೆ. ನನ್ನ ಅಯ್ಕೆಯಿಂದ ಜಿಲ್ಲಾ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲಾ ಎಂದು ರಾಜ್ಯಸಭೆ ನೂತನ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ರವಿವಾರದಂದು ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿದ ಅವರು ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳ ಆರ್ಶಿವಾದ ಪಡೆದುಕೊಂಡ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರದ ಉನ್ನತ ಮಟ್ಟದ ಸ್ಥಾನವನ್ನು ದಯಪಾಲಿಸಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಷ್ಟೆಯಿಂದ ದುಡಿದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಿ ಕೇಂದ್ರ ಸರಕಾರದಿಂದ ಬರುವ ಅನುದಾನವನ್ನು ಸರ್ಮಪಕವಾಗಿ ಬಳಸಿ ರಾಜ್ಯದ ಅಬಿವೃದ್ದಿಗೆ ಸಹಕರಿಸುತ್ತೇನೆಂದು ತಿಳಿಸಿದರು.
ನಿಮ್ಮ ಆಯ್ಕೆ ಜಾರಕಿಹೊಳಿ ಸಹೋದರರಿಗೆ ಮಗ್ಗಲು ಮುಳ್ಳಾಗಿದೆ ಎಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಜನ ಯಾವ ಕಾರಣಕ್ಕೆ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ ಜಾರಕಿಹೊಳಿ ಸಹೋದರರ ಮತ್ತು ನನ್ನ ಮಧ್ಯೆ ಒಳ್ಳೆಯ ಸಂಬಂಧವಿದೆ. ನಾನು ನಾಮಪತ್ರ ಸಲ್ಲಿಸುವಾಗ ಸಚಿವ ರಮೇಶ ಮತ್ತು ಪ್ರಮಾಣ ಪತ್ರ ಸ್ವೀಕರಿಸುವಾಗ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬಂದು ನನಗೆ ಆಶಿರ್ವಾದ ಮಾಡಿದ್ದಾರೆ. ಅನ್ಯತಾ ಭಾವಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಮೂವರು ಸೇರಿ ರಾಜ್ಯದ ಅಬಿವೃದ್ದಿಯೊಂದಿಗೆ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಪೂರಕವಾದ ನಿರ್ಣಯಗಳನ್ನು ತೆಗೆದುಕೊಂಡು ಕಾರ್ಯ ಮಾಡುತ್ತೇವೆ ಎಂದು ಕಡಾಡಿ ತಿಳಿಸಿದರು.
ಪ್ರಭಾಕರ ಕೋರೆ ಅವರಿಗೆ ಸಲಹೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ: ಡಾ. ಪ್ರಭಾಕರ ಕೋರೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಕೋರೆ ಅವರಿಗೆ ಸಲಹೆ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲಾ ಪಕ್ಷ ಅವರಿಗೂ ಸಹ ಗೌರವಕೊಟ್ಟು ರಾಜ್ಯಪಾಲರನ್ನಾಗಿ ಮಾಡುವ ಯೋಚನೆ ಬಿಜೆಪಿ ಪಕ್ಷ ಹೊಂದಿದೆ ಎಂದು ಸುಳಿವು ನೀಡಿದ ಅವರು ಒಟ್ಟಾರೆ ಕೇಂದ್ರ ಮತ್ತು ರಾಜ್ಯದ ನಾಯಕರು ನನ್ನ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡು ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇನೆ. ಕಡಾಡಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯಸಭೆ ಸದಸ್ಯನೆಂದು ಆಯ್ಕೆ ಮಾಡಿದ್ದಕ್ಕೆ ಜಿಲ್ಲೆಯ ಜನ ಅತ್ಯಂತ ಹರ್ಷ ವ್ಯಕ್ತ ಪಡಿಸಿದ್ದಾರೆ ಎಂದರು.
ಶಾಲು, ಮಾಲೆ ಬದಲು ನೋಟ್ ಬುಕ್ಕ ತನ್ನಿ: ರಾಜ್ಯಸಭೆಗೆ ಆಯ್ಕೆಯಾದ ನನ್ನನ್ನು ಅಭಿನಂಧಿಸಲು ಶಾಲು-ಮಾಲೆಗಳನ್ನು ತರುತ್ತಿರುವ ಅಭಿಮಾನಿಗಳಿಗೆ ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ ಕಡಾಡಿ ಅವರು ದೇಶದಲ್ಲಿ ಕೊರೋನಾ ಮಹಾಮಾರಿ ರೋಗ ಹರಡಿರುವದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ ಧರಿಸಿಕೊಂಡು ಶಾಲು-ಮಾಲೆಗಳ ಬದಲು ನೋಟ್-ಬುಕ್ಕಗಳನ್ನು ತಂದು ಕೊಟ್ಟರೆ ಆ ಬುಕ್ಕಗಳನ್ನು ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುವದು ಎಂದು ಅವರು ತಮ್ಮ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ , ಮಲ್ಲಿಕಾರ್ಜುನ ಈಟಿ, ಮಹಾಂತೇಶ ವಾಲಿ, ಎಸ್.ಎ. ಕೊತವಾಲ, ಪರಶುರಾಮ ಭಗತ, ಅಬ್ಬಾಸ ದೇಸಾಯಿ, ಪ್ರಮೋದ ಜೋಶಿ, ಅಶೋಕ ಪಾಟೀಲ, ಶಿವು ಹಿರೇಮಠ, ಬಸವರಾಜ ಹಿರೇಮಠ, ಲೋಕಯ್ಯ ಹಿರೇಮಠ, ಚಂದ್ರಶೇಖರ ಕೊಣ್ಣುರ, ಶಾಮಾನಂದ ಪೂಜೇರಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ನಗರದಲ್ಲಿಯ ಸಂಗೋಳ್ಳಿ ರಾಯಣ್ಣ, ಶಿವಾಜಿ, ಬಸವೇಶ್ವರ ಹಾಗೂ ಅಂಬೇಡ್ಕರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯಕ್ಕೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರಿಂದ ಹಾಗೂ ಸಚಿವರರಿಂದ ಸತ್ಕಾರ ಸ್ವೀಕರಿಸಿದರು.

Related posts: