RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಶಿಕ್ಷಣವು ಸೀಮಿತ ಸ್ಥಾನದಿಂದ ಅಸೀಮಿತ ಸ್ಥಳಕ್ಕೆ ಕರೆದೋಯ್ಯುವ ಅದ್ಭುತ ಶಕ್ತಿಯಾಗಿದೆ : ಆರ್.ಎಂ.ದೇಶಪಾಂಡೆ

ಗೋಕಾಕ:ಶಿಕ್ಷಣವು ಸೀಮಿತ ಸ್ಥಾನದಿಂದ ಅಸೀಮಿತ ಸ್ಥಳಕ್ಕೆ ಕರೆದೋಯ್ಯುವ ಅದ್ಭುತ ಶಕ್ತಿಯಾಗಿದೆ : ಆರ್.ಎಂ.ದೇಶಪಾಂಡೆ 

ಶಿಕ್ಷಣವು ಸೀಮಿತ ಸ್ಥಾನದಿಂದ ಅಸೀಮಿತ ಸ್ಥಳಕ್ಕೆ ಕರೆದೋಯ್ಯುವ ಅದ್ಭುತ ಶಕ್ತಿಯಾಗಿದೆ : ಆರ್.ಎಂ.ದೇಶಪಾಂಡೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 18 :
ಶಿಕ್ಷಣವು ಸೀಮಿತ ಸ್ಥಾನದಿಂದ ಅಸೀಮಿತ ಸ್ಥಳಕ್ಕೆ ಕರೆದೋಯ್ಯುವ ಅದ್ಭುತ ಶಕ್ತಿಯಾಗಿದೆ ಎಂದು ಎಸ್.ಎಲ್.ಜೆ ಫ್ರೌಢಶಾಲೆಯ ಮುಖ್ಯೋಪಾದ್ಯಯ ಆರ್.ಎಂ.ದೇಶಪಾಂಡೆ ಹೇಳಿದರು.

ಗುರುವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪಾಲಿಟೆಕ್ನಿಕ್ ನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಂಡು ಪ್ರತಿಭಾವಂತರಾಗಲು ಸಾಧ್ಯ. ನಿಮ್ಮನ್ನು ನೀವು ಜಯಿಸಿದರೆ. ಜಗತ್ತನ್ನೇ ಜಯಿಸಿದಂತಾಗುತ್ತದೆ. ವಿದ್ಯಾರ್ಥಿಗಳು ನಿಂತ ನೀರಾಗದೆ ಹರಿಯುವ ನೀರಾಗಿ ಸದಾ ಒಳ್ಳೆಯ ವಿಚಾರಗಳೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತನ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಎಚ್.ಎಸ್.ಅಡಿಬಟ್ಟಿ, ಉಪನ್ಯಾಸಕ ಪಿ.ಡಿ.ಪಂಚಾಳ ಇದ್ದರು.

Related posts: