RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ

ಗೋಕಾಕ:ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ 

ನಗರದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ವು 7 ವರ್ಷ ಪೂರೈಸಿದ ನಿಮಿತ್ತ ಏರ್ಪಡಿಸಿದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು.

ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ

ಗೋಕಾಕ ಏ, 5 ;- ನಗರದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಅಂಕಲಿ 2011 ರಂದು ಪ್ರಾರಂಭಗೊಂಡು 18,87,32,726 ರೂಗಳ ಠೇವಣಿ ಸಂಗ್ರಹಿಸಿ 2,15,08,867 ರೂ, ಗಳ ಸಾಲ ನೀಡಿ, 20,90,364 ರೂಗಳ ಲಾಭ ಗಳಿಸಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದು ಸ್ಥಳೀಯ ಶಾಖೆ ಅಧ್ಯಕ್ಷ ಜಯಾನಂದ ಮುನವಳ್ಳಿ ಹೇಳಿದರು.

ಗುರುವಾರದಂದು ನಗರದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ವು 7 ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಂಡ ಪೂಜಾ ಸಮಾರಂಭವನ್ನು ನೆರವೇರಿಸಿ ಮಾತನಾಡಿ, ಸದಸ್ಯರು ಈ ಸಹಕಾರಿಗೆ ಇದೇ ರೀತಿ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಖೆಯ ಸಂಚಾಲಕರುಗಳಾದ ಪ್ರಮೋದ ಗುಲ್ಲ, ವಿನಾಯಕ ಚಿಪ್ಪಲಕಟ್ಟಿ, ಮಲ್ಲಿಕಾರ್ಜುನ ಈಟಿ, ಶ್ರೀಶೈಲ ಮದನ್ನವರ, ಅಶೋಕ ಅಂಗಡಿ. ವ್ಯವಸ್ಥಾಪಕ ಚಿದಾನಂದ ಸರಡೆ ಇದ್ದರು.

Related posts: