ಗೋಕಾಕ:ಹರ್ ಘರ ತಿರಂಗಾ ಅಭಿಯಾನ ಅಂಗವಾಗಿ ಮಸೀದಿಯ ಮೇಲೆ ಹಾರಿದ ರಾಷ್ಟ್ರಧ್ವಜ

ಹರ್ ಘರ ತಿರಂಗಾ ಅಭಿಯಾನ ಅಂಗವಾಗಿ ಮಸೀದಿಯ ಮೇಲೆ ಹಾರಿದ ರಾಷ್ಟ್ರಧ್ವಜ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 13 :
75 ನೇ ಸ್ವಾತಂತ್ರ್ಯೋಸ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹರ್ ಘರ ತಿರಂಗಾ ಅಭಿಯಾನವನ್ನು ಬೆಂಬಲಿಸಿ ನರಗದ ವಾರ್ಡ ನಂ 22 ರಲ್ಲಿಯ ಈದ್ಗಾ ಮಸೀದಿ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ ಮುಲ್ಲಾ, ಅಬ್ಬು ಮುಜಾವರ, ಸಾದಿಕ ಹಲ್ಯಾಳ, ಮುಸ್ತಾಕ ಪುಲತ್ತಾಂಬೆ, ದಾದಾಪೀರ ಪೀರಜಾದೆ, ಮುಗುಟ ಪೈಲವಾನ, ಸಲಿಮ ಕಲ್ಲೋಳ್ಳಿ, ನಾಮದೇವ ಸುತಾರ ಉಪಸ್ಥಿತರಿದ್ದರು.