RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ

ಗೋಕಾಕ:ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ 

ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ

ಗೋಕಾಕ ಅ 2: ಕರದಂಟಿನ ನಾಡು ಗೋಕಾಕಿನಲ್ಲಿ ವರುಣನ ಅರ್ಭಟ ಜೋರಾಗಿದೆ ನಗರಾದ್ಯಂತ ಸುಮಾರು ಒಃದು ಘಂಟೆಗೂ ಹೆಚ್ಚು ಕಾಲ ಗುಡುಗು ಸಿಡಿಲು ಸಹಿತ ಮಳೆರಾಯ ಅಬ್ಬರಿಸಿದ್ದಾನೆ

ಇಂದು ಸಂಜೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಪ್ರಮುಖ ಹಳ್ಳಗಳು ,ರಸ್ತೆಗಳು , ಗಠಾರಗಳು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿದೆ . ನಗರದ ವಾಲ್ಮೀಕಿ ವೃತ್ತ ಸಂಪೂರ್ಣ ಜಲಾವೃತ್ತವಾಗಿದ್ದು ನಗರವನ್ನು ಪ್ರವೇಶಿಸಲು ವಾಹನ ಸವಾರರು ಹರಸಹಾಸ ಪಡುತ್ತಿದ್ದಾರೆ

ಇನ್ನು ಭಾರಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಗರದ ಬಹುತೇಕ ಕಡೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ರಸ್ತೆ ಮೇಲೆ ನೀರು ‌ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು. 

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Related posts: