ಗೋಕಾಕ:ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ! ಗೋಕಾಕದಲ್ಲಿ ಹೆರಾಯಿನ್ ಮಾರುತ್ತಿದ್ದ ಯುವಕರ ಸೆರೆ

ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ! ಗೋಕಾಕದಲ್ಲಿ ಹೆರಾಯಿನ್ ಮಾರುತ್ತಿದ್ದ ಯುವಕರ ಸೆರೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 22 :
ಮಾದಕ ವಸ್ತು ಹೆರಾಯಿನ್ ತರಿಸಿಕೊಂಡು ಯುವಕನಿಗೆ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಯುವಕರನ್ನು ಹಾಗೂ ಮಾದಕ ವಸ್ತು ಹೆರಾಯನ್ ಖರೀದಿಸುತ್ತಿದ್ದ ನಗರದ ಒಬ್ಬ ಯುವಕನನ್ನು ಬೆಳಗಾವಿಯ ಸಿಇಎನ್ ಪೊಲೀಸರು ರವಿವಾರದಂದು ಸಾಯಂಕಾಲ ನಗರದ ಚುಮರಿ ಬ್ಲಾಕ್ ಹಿಲ್ ಗಾರ್ಡನ್ ಹತ್ತಿರ ಇರುವ ( ಐಬಿ ) ಸಮಿಪ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೆರೆಗೆ ಬೆಳಗಾವಿಯ ಅಬ್ದುಲ್‌ಖಾದಿರ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು ಗಾಂಜಾವನ್ನು ಬೆಳಗಾವಿಯಿಂದ ತೆಗೆದುಕೊಂಡು ಗೋಕಾಕಕ್ಕೆ ಬಂದು ನಗರದ ಅರ್ಬಾಜ ಶಬಾಸಖಾನ ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರಿಂದ 26,100/- ರೂಪಾಯಿ ಮೌಲ್ಯದ ನಿಷೇಧಿತ ಹೇರಾಯಿನ್ (ಪೆನ್ನಿ) -ಮಾದಕ ವಸ್ತು ಒಟ್ಟು 87 ಚೀಟಗಳು 8 ಗ್ರಾಂ , 20 ಸಾವಿರ ಮೌಲ್ಯದ ಗಾಂಜಾ ಪದಾರ್ಥ 600 ಗ್ರಾಂ , ಚವರಲೆಟ್ ಸ್ಪಾರ್ಕ ಕಂಪನಿಯ ಕಾರ್ ನಂಬರ್ ಕೆಎ-51-ಎಮ್-ಸಿ0787, 1,00,000/ ರೂ, ಹೊಂಡಾ ಕಂಪನಿಯ ಡಿಯೊ ಮೋಟರ್ ಸೈಕಲ್ ನಂಬರ ಕೆಎ-49-ಡಬ್ಲ್ಯೂ-8018, 50,000 ರೂ ಸೇರಿದಂತೆ 5 ಮೊಬೈಲ್ ಫೋನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಗೋಕಾಕ ಡಿಎಸ್ಪಿ ಮನೋಜಕುಮಾರ ನಾಯಿಕ , ಬೆಳಗಾವಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಐ ವೀರೇಶ ಟಿ ದೊಡಮನಿ, ಪಿಎಸ್ಐ ಸಂಗಡ ನಾಗನಗೌಡ ಕಟ್ಟಿಮನಿಗೌಡ್ರ ಸಿಬ್ಬಂದಿಗಳಾದ ಎಸ್ ಆರ್. ಮಾಳಗಿ, ವೈ ವಿ ಸಪ್ತಸಾಗರ, ಎಮ್ ಬಿ ಕಾಂಬಳೆ, ಜಿ ಎಸ್ ಲಮಾಣಿ, ಎನ್ ಆರ್ ಘಡಪ್ಪನವರ, ಹಾಗೂ ಗೋಕಾಕ ಶಹರ ಠಾಣೆಯ, ಆರ್ ಎನ್ ಮುರನಾಳ ಭಾಗವಹಿಸಿದ್ದರು.