ಗೋಕಾಕ:ಬಸವ ಜಯಂತಿ ಹಾಗೂ ರಮಜಾನ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿ : ಪಿಎಸ್ಐ ಕೆ.ವಾಲಿಕರ
ಬಸವ ಜಯಂತಿ ಹಾಗೂ ರಮಜಾನ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿ : ಪಿಎಸ್ಐ ಕೆ.ವಾಲಿಕರ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಏ 30 :
ಬಸವ ಜಯಂತಿ ಹಾಗೂ ರಮಜಾನ ಹಬ್ಬ ಒಂದೆ ದಿನ ಬಂದಿದ್ದು ಈ ಹಬ್ಬಗಳನ್ನು ಸಮಾಜ ಭಾಂಧವರು ಸೌಹಾರ್ದತೆಯಿಂದ ಮತ್ತು ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ನಗರ ಠಾಣೆ ಪಿ.ಎಸ್.ಐ ಕೆ ವಾಲಿಕರ ಹೇಳಿದರು.
ಶನಿವಾರದಂದು ನಗರದ ಶಹರ ಪೊಲೀಸ ಠಾಣೆಯಲ್ಲಿ ನಡೆದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಂತಿಯ ಸಂಕೇತವಾಗಿರುವ ರಮಜಾನ ಹಬ್ಬವನ್ನು ಮುಸ್ಲಿಂ ಭಾಂಧವರು ಸೌಹಾರ್ದಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮಾಜದ ಮುಖಂಡರು ಮುತುವರ್ಜಿ ವಹಿಸಿಬೇಕು ಶಾಂತಿಯಿಂದ ಹಬ್ಬವನ್ನು ಆಚರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಯೂಸುಫ್ ಅಂಕಲಗಿ, ಮುಖಂಡರಾದ ಮಲ್ಲಿಕ ಪೈಲವಾನ, ಹುಸೇನ ಫನಿಬಂದ, ರಿಯಾಜ ಖತೀಬ, ಅಬ್ದುಲ್ ಗಫಾರ ಶಾಬಾಶಖಾನ ,ಸಾದಿಕ ಹಲ್ಯಾಳ, ಅಜೀಜ ಮೋಕಾಶಿ, ಶರೀಫ ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.