ಗೋಕಾಕ:ಕೋಮು ಸೌಹಾರ್ದತೆಯಿಂದ ಎಲ್ಲ ಸಮುದಾಯದವರು ಅಣ್ಣ ತಮ್ಮರಂತೆ ಬಾಳಿ : ಜಾವೇದ ಗೋಕಾಕ
ಕೋಮು ಸೌಹಾರ್ದತೆಯಿಂದ ಎಲ್ಲ ಸಮುದಾಯದವರು ಅಣ್ಣ ತಮ್ಮರಂತೆ ಬಾಳಿ : ಜಾವೇದ ಗೋಕಾಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 30 :
ದೇಶದಲ್ಲಿ ಕೋಮು ಸೌಹಾರ್ದತೆಯಿಂದ ಎಲ್ಲ ಸಮುದಾಯದವರು ಅಣ್ಣ ತಮ್ಮರಂತೆ ಬಾಳಿ ಬದುಕಿದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ ಹೇಳಿದರು.
ಶುಕ್ರವಾರದಂದು ನಗರದ ಮಹಾಲಿಂಗೇಶ್ವರ ನಗರದ ಮುಬಾರಕ್ ಮಸೀದಿಯಲ್ಲಿ ಹಮ್ಮಿಕೊಂಡ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಅವರು ಮಾತಾಡುತ್ತಾ ಈ ಪ್ರಕೃತಿಯ ಚಕ್ರದಲ್ಲಿ ಎಲ್ಲರು ಒಂದೇ, ಭಾವನೆಗಳಿಗೆ ತಕ್ಕಂತೆ ಜಾತಿ, ಧರ್ಮ, ಮತ ಆಚರಕ್ಕೆ ಬಂದಿವೆ ಅಷ್ಟೇ, ಪ್ರತಿಯೊಬ್ಬ ಮನುಷ್ಯರು ಸಮಯಕ್ಕೆ ಅನುಗುಣವಾಗಿ ಹೊಂದಾಗಿ ನಡೆದುಕೊಂಡು ಹೋಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಮುಸ್ಲಿಂ ಸಮಾಜದ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮುಖಂಡರಾದ ಭೀಮಗೌಡ ಪೊಲೀಸ ಗೌಡರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಇಲಾಹಿ ಖೈರದಿ, ರಿಯಾಜ ದೇಸಾಯಿ, ಇಸ್ಮಾಯಿಲ್ ಗೋಕಾಕ, ಎಂ.ಜಿ.ಮುಜಾವರ, ಇಸ್ಮಾಯಿಲ್ ಜಮಾದಾರ, ಮಲಿಕ ಪೈಲವಾನ, ಜಾಕೀರ ಕುಡಚಿಕರ ಸೇರಿದಂತೆ ಅನೇಕರು ಇದ್ದರು.