RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಯೋಧನ ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಖಂಡಿಸಿ ಮಾಜಿ ಸೈನಿಕರ ಸಂಘ ವತಿಯಿಂದ ಪ್ರತಿಭಟನೆ

ಗೋಕಾಕ:ಯೋಧನ ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಖಂಡಿಸಿ ಮಾಜಿ ಸೈನಿಕರ ಸಂಘ ವತಿಯಿಂದ ಪ್ರತಿಭಟನೆ 

ಯೋಧನ ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಖಂಡಿಸಿ ಮಾಜಿ ಸೈನಿಕರ ಸಂಘ ವತಿಯಿಂದ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 19 :

 
ರಾಯಚೂರ ಜಿಲ್ಲೆಯ ಲಿಂಗಸೂರ ತಾಲೂಕಿನ ಹಟ್ಟಿ ಗ್ರಾಮದ ನಿವಾಸಿ ಭಾರತೀಯ ಅರೆಸೇನಾ ಪಡೆ(ಬಿಎಸ್‍ಎಫ್) ಸೇವಾ ನಿರತ ಯೋಧನ ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ, ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲೂಕಾ ಘಟಕ, ಕರವೇ, ರೈತ ಸಂಘ ಸೇರಿದಂತೆÉ ವಿವಿಧ ಸಂಘಟನೆಗಳ ಕಾರ್ಯಕರ್ತರು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶನಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ನಂತರ ಅಲ್ಲಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಗ್ರೇಡ್-2 ತಹಶೀಲದಾರ ಎಲ್.ಎಚ್.ಭೋವಿ ಅವರಿಗೆ ಮನವಿ ನೀಡಿದರು.
ಯೋಧನಾದ ಅಮರೇಶ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಸುಮಾರು 20 ಜನರ ಗುಂಪು ಅವರ ತಾಯಿಯವರನ್ನು ಹತ್ಯೆ ಮಾಡಿರುತ್ತಾರೆ. ದೇಶದ ರಕ್ಷಣಾ ಕಾರ್ಯದಲ್ಲಿ ನಿರತರಾಗಿರಿಗೆ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ಇಲ್ಲದಂತಾಗಿದೆ. ಕುಲ್ಲಕ್ಷ ಕಾರಣಗಳಿಗೆ ಹಲ್ಲೆ ಮತ್ತು ಹತ್ಯೆಗಳಾಗುತ್ತೀರುವುದು ಖಂಡನೀಯ ವಿಷಯವಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ಪೊಲೀಸ್ ಇಲಾಖೆ ಯಾರ ಒತ್ತಡಕ್ಕೂ ಮಣೆ ಹಾಕದೇ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸೈನಿಕರ ಕುಟುಂಬಗಳಿಗೆ ರಕ್ಷಣೆ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲೂಕಾ ಘಟಕದ ಅಧ್ಯಕ್ಷ ಸಂತೋಷ ಹಿರೇಮಠ, ಮಾಜಿ ಯೋಧರಾದ ಸಿದ್ದಪ್ಪ ನಂದರಗಿ, ವಿವೇಕಾನಂದ ಭೂಶಿ, ಚಿದಾನಂದ ಕೊಳ್ಳೂರಮಠ, ಬಿ.ಎಸ್.ಕುಂಬಾರ, ದೇವೆಂದ್ರ ಗೊಡಚಿ, ಜಗದೀಶ ಮಠದ, ಜೈದೇವ ಹಿರೇಕೋಡಿ, ಬೀರಪ್ಪ ಹೊನ್ನಜ್ಜಗೋಳ, ನಿರ್ವಾಣಿ ನಿಲಜಗಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ನ್ಯಾಯವಾದಿ ಶಂಕರ ಧರೆನ್ನವರ, ಕೃಷ್ಣಾ ಖಾನಪ್ಪನವರ, ಮಲ್ಲಿಕಾರ್ಜುನ ಹುಳ್ಳಿ, ಉದಯ ಬಡೆಪ್ಪಗೋಳ, ನಾಗರಾಜ ಬಂಡಿ, ಶ್ರೀಶೈಲ ಕುಂಬಾರ, ಪುಂಡಲೀಕ ಜೋಶಿ, ಕೃಷ್ಣಾ ಮದೆನ್ನವರ ಸೇರಿದಂತೆ ಅನೇಕರು ಇದ್ದರು.

Related posts: