ಗೋಕಾಕ:ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ : ಕೆಪಿಸಿಸಿ ಕಾರ್ಯದರ್ಶಿ ಟಿ ಈಶ್ವರ
ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ : ಕೆಪಿಸಿಸಿ ಕಾರ್ಯದರ್ಶಿ ಟಿ ಈಶ್ವರ
ಗೋಕಾಕ ಸೆ 23: ರಾಜ್ಯ ಕಾಂಗ್ರೇಸ್ ಸರ್ಕಾರದ ಜನಪರ ಸಾಧನೆಗಳನ್ನು ಮನೆ-ಮನೆಗೆ ತಲುಪಿಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ ಈಶ್ವರ ಹೇಳಿದರು.
ಅವರು, ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಅರಭಾಂವಿ ಬ್ಲಾಕ್ ಮಟ್ಟದ ಮನೆ-ಮನೆಗೆ ಕಾಂಗ್ರೇಸ್ ಸಾಧನೆ ಕಾರ್ಯಕ್ರಮದಲ್ಲಿ ಮನೆ-ಮನೆಗೆ ತೆರಳಿ ಕಾಂಗ್ರೇಸ್ ಪಕ್ಷದ ಸಾಧನೆಯ ಕಿರುಹೊತ್ತಿಗೆಯನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಿಎಂ ಸಿದ್ಧರಾಮಯ್ಯ ನುಡಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಪ್ರೀಯ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೇಸ್ ಪಕ್ಷದ ಸಾಧನೆಗಳನ್ನು ಕೇವಲ ಮುಖಂಡರಿಂದ ತಿಳಿಸಲು ಸಾಧ್ಯವಿಲ್ಲ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮವಹಿಸಿ ಸರ್ಕಾರದ ಸಾಧನೆ ತಿಳಿಸಿಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಮಂಜುನಾಥ ನಾಯಿಕ, ಅರಭಾಂವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣ ಉಪ್ಪಾರ, ಬಸವಣ್ಣೆಪ್ಪ ಗೋರೊಶಿ, ಕಲ್ಲಪ್ಪ ಲಕ್ಕಾರ, ಅಡಿವೆಪ್ಪ ಕಂಕಾಳಿ, ಸುನೀಲ ಎತ್ತಿನಮನಿ, ಸಿದ್ದಣ್ಣ ಮುಂಡಿಗನಾಳ, ಸಾತಪ್ಪ ಖಾನಾಪೂರ, ಮಲ್ಲಪ್ಪ ಕುರಬೇಟ, ಸುರೇಶ ಗೊಂದಿ, ಭೀಮಶಿ ಗೋರೊಶಿ, ಗುರುನಾಥ ಉಪ್ಪಾರ, ಶಾನೂರ ಕೆಸರಗೊಪ್ಪ, ಹಣಮಂತ ಉಪ್ಪಾರ ಸೇರಿದಂತೆ ಇತರರು ಇದ್ದರು.