ಗೋಕಾಕ:ತೋಟದಲ್ಲಿ ಕೆಲಸಕ್ಕಿದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ! : ಮರಡಿಶಿವಾಪೂರ ಗ್ರಾಮದಲ್ಲಿ ಘಟನೆ
ತೋಟದಲ್ಲಿ ಕೆಲಸಕ್ಕಿದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ! : ಮರಡಿಶಿವಾಪೂರ ಗ್ರಾಮದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 23 :
ತೋಟದಲ್ಲಿ ಕೆಲಸಕ್ಕಿದ್ದಂತಹ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಮರಡಿಶಿವಾಪೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 17ರಂದು ರಾತ್ರಿಯ ವೇಳೆ ಮಾಲೀಕನು ಮಹಿಳೆಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಸಂತ್ರಸ್ತೆಯು ಆರೋಪಿಯ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ, ಸಂತ್ರಸ್ತೆಯ ಪತಿ ಮನೆಯಿಂದ ಹೊರ ಹೋದಾಗ ಮಾಲೀಕನು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಮಹಿಳೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ದೂರನ್ನು ಆಧರಿಸಿ ಅತ್ಯಾಚಾರವೆಸಗಿದ್ದ ಆರೋಪಿ ಸಿದ್ದಪ್ಪ ಕೊಲ್ಲೂರು ಹಾಗೂ ಅವರ ಸಹಚರ ಉದಯ ಅಲಿಯಾಸ್ ಉದಪ್ಪ ರಾಮಪ್ಪ ಅವರಾಧಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.