ಗೋಕಾಕ:ಡಿಸೆಂಬರ್ 31ರ ವರೆಗೆ ಮತಕ್ಷೇತ್ರದಾದ್ಯಂತ ಜನಸ್ಪಂದನ ಅಭಿಯಾನ : ಕಾಂಗ್ರೆಸ್ ಮುಖಂಡ ಅಶೋಕ

ಡಿಸೆಂಬರ್ 31ರ ವರೆಗೆ ಮತಕ್ಷೇತ್ರದಾದ್ಯಂತ ಜನಸ್ಪಂದನ ಅಭಿಯಾನ : ಕಾಂಗ್ರೆಸ್ ಮುಖಂಡ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ್ 18 :
ಗೋಕಾಕ್ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ಮತ್ತು ಮನೆಗಳಿಗೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವುದರ ಮೂಲಕ ಜನಾಭಿಪ್ರಾಯದ ಜನಮನ್ನಣೆ ಪಡೆಯಲು ಈಗಾಗಲೇ ಸಪ್ಟೆಂಬರ್ 1 ರಿಂದ ಜನಸ್ಪಂದನ ಅಭಿಯಾನ ನಡೆಸುತ್ತಿದ್ದೇನೆ ಈ ಕಾರ್ಯವು ಡಿಸೆಂಬರ್ 31 ರ ವರೆಗೆ ನಡೆಸಲಾಗುವುದು ಎಂದು ಹಿರಿಯ ರಾಜಕೀಯ ಧುರೀಣ ಮತ್ತು ಕಾಂಗ್ರೆಸ್ ಮುಖಂಡ ಅಶೋಕ ನಿಂಗಯ್ಯಾಸ್ವಾಮಿ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು ಈ ಅಭಿಯಾನದಲ್ಲಿ ತಾವು ಈಗಾಗಲೇ ಹತ್ತು ಗ್ರಾಮಗಳಿಗೆ ಭೇಟಿ ನೀಡಿರುವದಾಗಿ ತಿಳಿಸಿ ಅಲ್ಲಿಯ ಪ್ರತಿಯೊಂದು ಮನೆಯ ಮತದಾರರೊಂದಿಗೆ ತಮ್ಮ ರಾಜಕೀಯ ನಿಲುವು, ಅಭಿವೃದ್ಧಿಪರ ಚಿಂತನೆಗಳು, ಗೋಕಾಕ್ ತಾಲೂಕಿನ ಸಾಮಾಜಿಕ, ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ ತಾವು ಕೈಗೊಳ್ಳಬೇಕಾದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಿಗೆ ಜನಾಭಿಪ್ರಾಯದ ಜನಮನ್ನಣೆ ಕೋರುತ್ತಿರುವದಾಗಿ ತಿಳಿಸಿದರು.
ಡಿಸೆಂಬರ್ 31 ರೊಳಗಾಗಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಜನಾಭಿಪ್ರಾಯದ ಮನ್ನಣೆ ಕೋರುವದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ತಾವು ಸಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಕೈಗೊಂಡ ಜನ ಸಂಪರ್ಕ ಅಭಿಯಾನದ ಕುರಿತು ಮೆಲಕು ಹಾಕಿದರು. ಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಸಭೆ ಸಮಾರಂಭಕ್ಕಿಂತಲೂ ನೇರವಾಗಿ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿಯಾಗಿ ಪ್ರಚಾರ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿರುವದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಪುಟ್ಟು ಖಾನಾಪುರೆ, ನಿಂಗಪ್ಪಾ ಅಮ್ಮಿನಭಾವಿ , ಬೀರಪ್ಪ ನಾಗೋಜಿ, ಮಲ್ಲಪ್ಪಾ ಜಟ್ಟೇನವರ ಮುಂತಾದವರು ಉಪಸ್ಥಿತರಿದ್ದರು.