ಗೋಕಾಕ:ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ : ಶ್ರೀರಾಮ ಸೇನೆಯ ಕಾರ್ಯಕರ್ತರ ಆಗ್ರಹ
ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ : ಶ್ರೀರಾಮ ಸೇನೆಯ ಕಾರ್ಯಕರ್ತರ ಆಗ್ರಹ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :
16 ವರ್ಷದ ಬಾಲಕಿಯನ್ನು ಪ್ರೀತಿ ಮಾಡುವ ನೆಪ ಮಾಡಿ ಹಾರೂಗೇರಿಯ ರಸ್ತೆ ಮಧ್ಯದಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ, ಯುವತಿಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಸೋಮವಾರದಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸಮಾಜಘಾತುಕ ಕ್ರೂರ ಪ್ರವೃತ್ತಿಯ ಮಾನಸಿಕತೆಯುಳ್ಳ ಅನ್ಯ ಕೋಮಿನ ಯುವಕ 16 ವರ್ಷದ ಬಾಲಕಿಯನ್ನು ಪ್ರೀತಿ ಮಾಡುವ ನೆಪ ಮಾಡಿ, ಆತಳ ಮೇಲೆ ಲೈಂಗೀಕ ಕ್ರೀಯೆಗೆ ಒತ್ತಾಯಿಸಿ, ಯುವತಿ ಒಪ್ಪದ ಕಾರಣ ಅವಳನ್ನು ಹಾಡುಹಗಲೆ ರಸ್ತೆಯ ಮಧ್ಯದಲ್ಲಿ ತಡೆದು ಬರ್ಬರವಾಗಿ ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದು, ಆರೋಪಿ ಯುವಕ ಹಾಗೂ ಇತನ ಜೊತೆ ಇನ್ನುಳಿದ ಮೂವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು.
ರಾಜ್ಯದಲ್ಲಿ ಪದೇ ಪದೇ ಹಿಂದು ಯುವತಿಯರ ಮೇಲೆ ಅತ್ಯಾಚಾರ ವೇಸಗಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ಮರುಕಳಿಸುತ್ತಿದ್ದು, ಇಂತಹ ಘಟನೆಗಳಿಂದ ಮಹಿಳೆಯರು, ಯುವತಿಯರು ಭಯಬೀತರಾಗಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮಹಿಳೆಯರಿಗಾಗಿ ನಿರ್ಮಾಣ ಮಾಡಿರುವ ರಾಣಿ ಚೆನ್ನಮ್ಮ ಪಡೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮಹಿಳೆಯರ ಮತ್ತು ಯುವತಿಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿ, ಅತ್ಯಾಚಾರಕ್ಕೋಳಗಾದ ಯುವತಿಯರ ಕುಟುಂಬಗಳಿಗೆ ಸರಕಾರ ತಕ್ಷಣ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಪ್ರಮುಖರಾದ ಬಸು ಪಡತಾರೆ, ಶಿವು ಹಿರೇಮಠ, ರವಿ ಪೂಜೇರಿ, ಮಹೇಶ ಚಿಗಡೊಳ್ಳಿ, ಸಿದ್ದು ಘೋರ್ಪಡೆ, ಶಿವು ಪೂಜೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.