RNI NO. KARKAN/2006/27779|Friday, August 1, 2025
You are here: Home » breaking news » ಖಾನಾಪುರ :ನಾಶೀರ ಬಾಗವಾನ ಖಾನಾಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಲಿ : ಕಾಂಗ್ರೇಸ ಕಾರ್ಯಕರ್ತರ ಆಗ್ರಹ

ಖಾನಾಪುರ :ನಾಶೀರ ಬಾಗವಾನ ಖಾನಾಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಲಿ : ಕಾಂಗ್ರೇಸ ಕಾರ್ಯಕರ್ತರ ಆಗ್ರಹ 

ನಾಶೀರ ಬಾಗವಾನ ಖಾನಾಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಲಿ : ಕಾಂಗ್ರೇಸ ಕಾರ್ಯಕರ್ತರ ಆಗ್ರಹ

ಖಾನಾಪೂರ ಸೆ 16: ಮುಂಬರುವ ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನ ಸಭಾ ಕ್ಷೇತ್ರದಿಂದ ನಾಶೀರ ಬಾಗವಾನ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು

ಶುಕ್ರವಾರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ವಿಷಯವಾಗಿ ಗಹನವಾದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ
ಕಳೆದ ಚುನಾವಣೆಯಲ್ಲಿ ಖಾನಾಪೂರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದ ಅಂಜಲಿ ನಿಂಬಾಳ್ಕರ ಅವರನ್ನು ಕೆಪಿಸಿಸಿಯು ಭಾಲಭವನದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಅಲ್ಲದೇ ಸಂಕೇಶ್ವರ ಕ್ಷೇತ್ರದಿಂದ ಅವರನ್ನು ಕೆಪಿಸಿಸಿ ಸದಸ್ಯರನ್ನಾಗಿ ಮಾಡಿದೆ, ಹುಕ್ಕೇರಿ ತಾಲೂಕಿನ ಸಂಕೇಶ್ವರ ದಿಂದ ಅವರ ಕೆಪಿಸಿಸಿ ಗೆ ನೇಮಕ ಆಗಿದ್ದರೂ , ವಿನಾಕಾರಣ ಅಂಜಲಿ ನಿಂಬಾಳ್ಕರ ಅವರು ಖಾನಾಪೂರ ಕ್ಷೇತ್ರದಲ್ಲಿ ತಲೆಹಾಕುತ್ತಿದ್ದಾರೆ ಎಂದು ಸಭೆಯಲ್ಲಿ ಕಾರ್ಯಕರ್ತರು ಅಂಜಲಿ ನಿಂಬಾಳ್ಕರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ .

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ ವಕೀಲ ಸಿ ಬಿ ಅಂಬೋಜಿ ಅವರನ್ನು ಮರು ನೇಮಕ ಮಾಡಬೇಕು. ಹಾಗೂ ನಾಶೀರ ಬಾಗವಾನ ಅವರನ್ನು ೨೦೧೮ರ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು‌ ಕಾರ್ಯಕರ್ತರು ಈ ಸಭೆಯಲ್ಲಿ ಪಕ್ಷದ ಮುಖಂಡರಲ್ಲಿ ಆಗ್ರಹಿಸಿದ್ದಾರೆ

ಸಭೆಯಲ್ಲಿ ಹಿರಿಯ ಕಾಂಗ್ರೇಸ ನಾಯಕ ರಫೀಕ ಖಾನಾಪೂರಿ ಸೇರಿದಂತೆ ಅನೇಕ ನಾಯಕರು , ಕಾರ್ಯಕರ್ತರು ಉಪಸ್ಥಿತರಿದ್ದರು

Related posts: