RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ 

ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 :

 
ಪ್ರಜಾಪ್ರಭುತ್ವದಲ್ಲಿ ಶಿಕ್ಷಣವಂತರು ಪ್ರಜಾಪ್ರಭುತ್ವವನ್ನು ಉಳಿಸಬಲ್ಲರು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವದರೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೋಳಿಸುವಂತೆ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಹಿಲಗಾರ್ಡನ ಕಾರ್ಯಾಲಯದಲ್ಲಿ ಯಮಕನಮರಡಿ ಕ್ಷೇತ್ರದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ ಹಾಗೂ ಸಾನಿಟೈಜರಗಳನ್ನು ವಿತರಿಸಿ ಮಾತನಾಡುತ್ತಾ ಕೊವೀಡ್ ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸನ್ನಧರಾಗಿರುವದು ಸಂತಸದ ವಿಷಯವಾಗಿದೆ. ನಿಮ್ಮ ದಶಕಗಳ ಕಲಿಕೆಯ ಜ್ಞಾನ ಸಂಗ್ರಹವನ್ನು ಮೌಲ್ಯ ಮಾಪನ ಮಾಡುವ ಈ ಪ್ರಯತ್ನ ನಿಮ್ಮಗಳ ಭವಿಷ್ಯತಿನ ಬದುಕಿಗೆ ಬುನಾದಿ ಯಾಗಲಿದೆ‌ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಇಓ ಮಹೋನ ದಂಡಿನ , ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು

Related posts: