RNI NO. KARKAN/2006/27779|Sunday, February 15, 2026
You are here: Home » breaking news » ಘಟಪ್ರಭಾ:ಬಕ್ರೀದ ಹಬ್ಬ ಆಚರಣೆ ವೇಳೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಸಿಪಿಐ ಶ್ರೀಶೈಲ

ಘಟಪ್ರಭಾ:ಬಕ್ರೀದ ಹಬ್ಬ ಆಚರಣೆ ವೇಳೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಸಿಪಿಐ ಶ್ರೀಶೈಲ 

ಬಕ್ರೀದ ಹಬ್ಬ ಆಚರಣೆ ವೇಳೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಸಿಪಿಐ ಶ್ರೀಶೈಲ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 15 :

 

ಮುಸ್ಲಿಂ ಬಾಂಧವರು ಬಕ್ರೀದ ಹಬ್ಬ ಆಚರಣೆ ವೇಳೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಗುರುವಾರದಂದು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಬಕ್ರೀದ ಹಬ್ಬದ ನಿಮಿತ್ಯ ಕರೆಯಲಾದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಕೊಂಚ ತಗ್ಗಿದ್ದರೂ ಸಹ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. ದೇಶಾದ್ಯಂತ ಜು 21 ರಂದು ಬಕ್ರೀದ ಹಬ್ಬ ಆಚರಿಸಲಾಗುತ್ತಿದ್ದು, ಹಬ್ಬ ಆಚರಣೆ ವೇಳೆಯಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರು ಪಾಲಿಸುವದರೊಂದಿಗೆ ಸೌರ್ಹಾದತೆಯಿಂದ ಆಚರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ನೂರ ಪೀರಜಾದೆ, ಮುಸ್ತಾಕ ಖಾಜಿ, ಫಯ್ಯಾಜ್ ಶೇಖ, ದಾದಾಪೀರ ಶಾಬಾಜಖಾನ, ಪ.ಪಂ ಸದಸ್ಯ ಸಲೀಮ ಕಬ್ಬೂರ, ಮುನ್ನಾ ಪಾಶ್ಚಾಪೂರೆ, ದಿಲಾವರ ಬಾಳೇಕುಂದ್ರಿ, ಬಾಬು ದೇಸಾಯಿ, ಮುಸ್ತಾಕ ಸೌದಾಗರ, ದಾದು ಬೇಪಾರಿ, ರಝಾಕ ಚೌಧರಿ ಸೇರಿದಂತೆ ಪೊಲೀಸ ಸಿಬ್ಬಂದಿ ಇದ್ದರು.

Related posts: