ಗೋಕಾಕ:ಸರ್ವ ಧರ್ಮಸಾರ ಒಂದೇ ಎಂದು ಸಾರಿದ ಕವಿ ಸಂತ ಶಿಶುನಾಳ ಶರೀಫರು : ಡಾ.ಎಂ.ಆರ್.ನಾಗರಾಜರಾವ
ಸರ್ವ ಧರ್ಮಸಾರ ಒಂದೇ ಎಂದು ಸಾರಿದ ಕವಿ ಸಂತ ಶಿಶುನಾಳ ಶರೀಫರು : ಡಾ.ಎಂ.ಆರ್.ನಾಗರಾಜರಾವ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 8 :
ಜಾತಿ,ಮತ ಭೇದಗಳನ್ನು ಮರೆತು ಸರ್ವ ಧರ್ಮಸಾರ ಒಂದೇ ಎಂದು ಸಾರಿದ ಕವಿ ಸಂತ ಶಿಶುನಾಳ ಶರೀಫರು ಎಂದು ಸಿರಿಗನ್ನಡ ವೇದಿಕೆಯ ವಿಶ್ವಸ್ಥ ಮಂಡಳಿಯ ಧರ್ಮದರ್ಶಿ ಡಾ.ಎಂ.ಆರ್.ನಾಗರಾಜರಾವ ಹೇಳಿದರು.
ಅವರು ಸಿರಿಗನ್ನಡ ಮಹಿಳಾ ವೇದಿಕೆ ಬೆಳಗಾವಿ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ಸಂತ ಶಿಶುನಾಳ ಶರೀಫರ ಜನ್ಮ ಜಯಂತಿಯ ಕಾರ್ಯಕ್ರಮವನ್ನು ಅಂತರ ಜಾಲದಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷೆ ಹೇಮಗಂಗಾ, ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜಿರಗ್ಯಾಳ, ಜಿಲ್ಲಾಧ್ಯಕ್ಷೆ ಜಯಾ ಚುನಮುರಿ, ಹಾಗೂ ಅತಿಥಿ ಪ್ರೋ ವಿಜಯಲಕ್ಷ್ಮಿ ಪುಟ್ಟಿ, ಇವರು ಶರೀಫರ ಜೀವನ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಎಂ.ಡಿ ಕುಳುರ್ವಾವ , ಡಾ.ಎನ್.ಜಿ.ದೇಶಪಾಂಡೆ, ಸಿ.ಎಂ.ಉಮೇಶ್, ಈಶ್ವರ ಮಮದಾಪೂರ, ಹೇಮಾ ಸೊನ್ನಳಿ , ಸುನಂದಾ ಎಮ್ಮಿ, ಜ್ಯೋತಿ ಬಾದಾಮಿ ಸೇರಿದಂತೆ ಅನೇಕರು ಇದ್ದರು.