RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಗ್ರಾಮ ದೇವತೆಯರ ಜಾತ್ರೆಯನ್ನು ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ : ಅಧ್ಯಕ್ಷ ರಮೇಶ ಜಾರಕಿಹೊಳಿ

ಗೋಕಾಕ:ಗ್ರಾಮ ದೇವತೆಯರ ಜಾತ್ರೆಯನ್ನು ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ : ಅಧ್ಯಕ್ಷ ರಮೇಶ ಜಾರಕಿಹೊಳಿ 

ಗ್ರಾಮ ದೇವತೆಯರ ಜಾತ್ರೆಯನ್ನು ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ : ಅಧ್ಯಕ್ಷ ರಮೇಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 10 :

 

 

ಗ್ರಾಮ ದೇವತೆಯರ ಜಾತ್ರೆಯನ್ನು ಎಲ್ಲರೂ ಸಂಘಟಿತರಾಗಿ ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ಇಲ್ಲಿಯ ಗುರುವಾರ ಪೇಠೆಯ ಶ್ರೀ ಲಕ್ಷ್ಮೀ ದೇವಿ ಗುಡಿಯ ಆವರಣದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಆಚರಿಸುವ ಜಾತ್ರಾ ಪೂರ್ವಬಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು
ಈ ಬಾರಿಯ ಜಾತ್ರೆ ಗೋಕಾಕ ತಾಲೂಕಿನ ಜನರ ಜಾತ್ರೆ ಯಾಗಬೇಕು ಜನತೆ ಶಾಂತಿ ಹಾಗೂ ಸಂತೋಷದಿಂದ ಪಾಲ್ಗೋಳಬೇಕು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರು ಮತ್ತು ವಿದ್ವಾಂಸರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಬರುವ ಯುಗಾದಿಯಂದು ದಿನಾಂಕವನ್ನು ಅಧಿಕೃತವಾಗಿ ತಿಳಿಸಲಾಗುವದು ನಗರದಲ್ಲಿ ಗಠಾರ ,ರಸ್ತೆ ಅಗಲೀಕರಣ ಬೀದಿ ದೀಪಗಳು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೋಳಿಸಿ ನಗರವನ್ನು ಸುಸಜ್ಜಿತ ಗೋಳಿಸಲು ಹಗಲಿರುಳು ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಮುಖ್ಯಮಂತ್ರಿಗಳಿಂದ ಹೆಚ್ಚಿನ ಅನುದಾನ ಪಡೆದು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವದು ನಾವೆಲ್ಲರೂ ವಿಜ್ರಂಭಣೆಯಿಂದ ಜಾತ್ರೆಯನ್ನು ಆಚರಿಸಿ ದೇವಿಯರ ಅನುಗ್ರಹಕ್ಕೆ ಪಾತ್ರರಾಗೋಣಾ ಎಂದರು
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಸಿದ್ದಲಿಂಗ ದಳವಾಯಿ , ಎಸ್.ಎ ಕೋತವಾಲ, ಪ್ರಭು ಚವ್ಹಾಣ , ಅಶೋಕ ಪಾಟೀಲ, ಅಶೋಕ ಹೆಗ್ಗನವರ , ಅಡಿವೆಪ್ಪಾ ಕಿತ್ತೂರ ಹಾಗೂ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಇದ್ದರು .

Related posts: